ಚಳ್ಳಕೆರೆ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮವಾದ ರೀತಿಯಲ್ಲಿ ಬೋಧನಾ ಕಾರ್ಯಗಳಲ್ಲಿ ತೊಡಗಿದರೆ ವಿದ್ಯಾರ್ಥಿಗಳು ತಮ್ಮ ಮನದಾಳದ ನೋವುಗಳನ್ನು ತಮ್ಮ ಭಾವನಾತ್ಮಕ ಕಣ್ಣೀರಿನ ಮೂಲಕ ಬೀಳ್ಕೊಡುತ್ತಾರೆ ಎಂಬ ದೃಶ್ಯ ಇಂದು ನಗರದ ಹೆಗ್ಗೆರೆ ತಾಯಮ್ಮ ಸರ್ಕಾರಿ ಪ್ರೌಢಶಾಲೆಯಲ್ಲಿ ಕಂಡುಬಂದಿತು.
ಶಾಲೆಯ ಶಿಕ್ಷಕರಾದ ಶಿವಕೀರ್ತಿ ಪ್ರಕಾಶ್ ಹಾಗೂ ಜ್ಯೋತಿ ರವರು ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಬಿಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಮೂವರು ಶಿಕ್ಷಕರ ಕರ್ತವ್ಯದ ಬಗ್ಗೆ ಭಾರವಾದ ಮನಸ್ಸಿನಿಂದ ಬಿಕ್ಕಿ ಅಳುತ್ತಾ ದುಃಖದಿಂದ ಗುಣಗಾನವನ್ನು ಮಾಡಿದರು.
ಶಾಲೆಯ ವಿದ್ಯಾರ್ಥಿನಿ ಅಂಕಿತ ಮಾತನಾಡಿ ಇಂತಹ ಶಿಕ್ಷಕರ ಪಾಠ ಪ್ರವಚನಗಳು ಮುಂದಿನ ದಿನಗಳಲ್ಲಿ ನಮಗೆ ದೊರೆಯುವುದಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಂಬಂಧ ತಂದೆ ತಾಯಿಯರ ಸಂಬಂಧಕ್ಕಿಂತ ಮಿಗಿಲಾಗಿತ್ತು ವರ್ಗಾವಣೆ ಆಗಿದ್ದರಿಂದ ಇಂತಹ ಶಿಕ್ಷಕರ ಸೇವೆ ಈ ಶಾಲೆಗೆ ದೊರೆಯದೆ ಇರುವುದಕ್ಕೆ ಮುಂದಿನ ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟವಾಗುತ್ತದೆ ಈ ಶಿಕ್ಷಕರು ವರ್ಗಾವಣೆಗೊಂಡಿರುವ ಶಾಲೆಗಳಲ್ಲಿಯೂ ಉತ್ತಮ ಪಾಠ ಪ್ರವಚನ ಮಾಡಿ ಅಲ್ಲಿನ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಿ ಎಂದು ತಿಳಿಸಿದರು.
ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಜ್ ಕುಮಾರ್ ಮಾತನಾಡಿ ಶಿಕ್ಷಕರಾದ ಶಿವ ಕೀರ್ತಿ ಪ್ರಕಾಶ್ ಜ್ಯೋತಿ ಯವರು ಶಾಲೆಯಲ್ಲಿ ಮಕ್ಕಳಿಗೆ ಅತ್ಯಂತ ಪ್ರೀತಿ ಪಾತ್ರರಾಗಿ ಎಲ್ಲಾ ಶಿಕ್ಷಕರ ಒಡನಾಡಿಗಳಾಗಿ ಸಹೋದರ ಭಾವನೆಯಿಂದ ಒಂದು ಕುಟುಂಬವಾಗಿ ಸೇವೆ ಸಲ್ಲಿಸಿದ್ದೆವು ಸರ್ಕಾರಿ ಶಾಲಾ ಶಿಕ್ಷಕರಿಗೆ ವರ್ಗಾವಣೆ ಎಂಬುದು ಸಹಜ ಪ್ರಕ್ರಿಯೆ ಎಲ್ಲ ಶಿಕ್ಷಕರು ಇಂತಹ ನೋವನ್ನು ಅನುಭವಿಸುವುದು ಸಹಜ ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಆಶಿಸಿದರು.
ವರ್ಗಾವಣೆಗೊಂಡ ಶಿಕ್ಷಕ ಶಿವ ಕೀರ್ತಿ ಮಾತನಾಡಿ ಶಿಕ್ಷಕನಾಗಿ ನಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಇಲ್ಲಿನ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳ ಪ್ರೀತಿ ಕಾರಣವಾಗಿದೆ ಶಿಕ್ಷಕರು ಮಕ್ಕಳ ಮನಸ್ಥಿತಿಗೆ ತಕ್ಕಂತೆ ಪಾಠ ಪ್ರವಚನಗಳನ್ನು ಬೋಧಿಸುತ್ತಾರೆ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಉನ್ನತ ಸ್ಥಾನಕ್ಕೆ ಏರಿದಾಗ ಪ್ರತಿಯೊಬ್ಬ ಶಿಕ್ಷಕನಿಗೆ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ ನಾನು ವರ್ಗಾವಣೆ ಯಾಗಿದ್ದರು ಈ ಶಾಲೆಯ ವಿದ್ಯಾರ್ಥಿಗಳ ಶ್ರೇಯಸ್ಸನ್ನು ಸದಾ ಬಯಸುತ್ತೇನೆ ಎಲ್ಲಾ ವಿದ್ಯಾರ್ಥಿನಿಯರು ಉತ್ತಮ ಅಂಕ ಗಳಿಸಿ ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಶಿಕ್ಷಕರಾದ ಪ್ರಕಾಶ್ ಜ್ಯೋತಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ವೇಣಿ ಶಿವಣ್ಣ ಸುಜಾತ, ಪ್ರಮೀಳಾ, ಸುಜಾತ .ಬಿ ಎಲ್ ಉಮಾ ಪ್ರಾಣೇಶ್ ,ಪ್ರದೀಪ್ ರಾಜ ಕುಮಾರ್, ಗಂಗುಬಾಯಿ ನಾಗರತ್ನ, ಪ್ರವೀಣ ಕುಮಾರಿ, ಶಂಕರ್ ರಂಗಸ್ವಾಮಿ ಪ್ರಸನ್ನ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.