ನಾನ್ ವೆಜಿಟೇರಿಯನ್ಸ್ಗೆ ಮಟನ್ ಅಚ್ಚುಮೆಚ್ಚಿನ ಖಾದ್ಯ. ಚಿಕನ್ನಂತೆಯೇ ಮಟನ್ ಅನ್ನು ಇಷ್ಟಪಡುವವರು ಸಾಕಷ್ಟು ಮಂದಿ ಇದ್ದಾರೆ. ಮಟನ್ ಕೂಡ ನಾನಾ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮಟನ್, ನಮ್ಮ ದೇಹದ ಉಷ್ಣತೆಯನ್ನು ತಣಿಸುತ್ತದೆ, ಚರ್ಮವನ್ನು ಬಲಪಡಿಸುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಅಲ್ಲದೇ ಆಡಿನ ತಲೆ ಮಾಂಸವನ್ನು ತಿನ್ನುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ.
ಸದ್ಯ ನಾವಿಂದು ರಾಜಸ್ಥಾನ್ ಶೈಲಿಯ ಮಟನ್ ಗ್ರೇವಿ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ.
ಬೇಕಾಗಿರುವ ಸಾಮಾಗ್ರಿಗಳು: ಮಟನ್ – 1 ಕೆಜಿ, ಮೆಣಸಿನಕಾಯಿ – 25, ಸಾಸಿವೆ ಎಣ್ಣೆ – 2 ಟೀಸ್ಪೂನ್, ಚಕ್ಕೆ- 2, ಲವಂಗ – 2, ಹಸಿರು ಏಲಕ್ಕಿ – 2, ಕಪ್ಪು ಏಲಕ್ಕಿ – 1, ಬಿರಿಯಾನಿ ಎಲೆಗಳು – 2, ಜಾಯಿಕಾಯಿ -1, ತೆಳುವಾಗಿ ಕತ್ತರಿಸಿದ ಈರುಳ್ಳಿ – 5, ಬೆಳ್ಳುಳ್ಳಿ ಪೇಸ್ಟ್ – 1 1/2 ಟೀಸ್ಪೂನ್, ಶುಂಠಿ ಪೇಸ್ಟ್ – 1 ಚಮಚ, ಧನಿಯಾ ಪುಡಿ – 2 ಟೀಸ್ಪೂನ್, ಉಪ್ಪು – ಅಗತ್ಯಕ್ಕೆ ತಕ್ಕಷ್ಟು, ತುಪ್ಪ – 1 ಟೇಬಲ್ ಸ್ಪೂನ್, ಮೊಸರು – 1 ಕಪ್, ಕೊತ್ತಂಬರಿ ಸೊಪ್ಪು – ಸ್ವಲ್ಪ.
ಮಟನ್ ಗ್ರೇವಿ ಮಾಡುವ ವಿಧಾನ: ಮೊದಲು ಅಡುಗೆಗೆ ತೆಗೆದುಕೊಂಡಿರುವ ಮಟನ್ ಅನ್ನು ಸ್ವಚ್ಛಗೊಳಿಸಿ. ನಂತರ ಮಥಾನಿಯಾ ಮೆಣಸಿನಕಾಯಿ ಮತ್ತು ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ 1 ಗಂಟೆ ನೆನೆಸಿ, ಅದನ್ನು ರುಬ್ಬಿ ಪೇಸ್ಟ್ ಮಾಡಿಟ್ಟುಕೊಳ್ಳಿ, ಬಾಣಲೆಯಲ್ಲಿ ಸಾಸಿವೆ ಎಣ್ಣೆಯನ್ನು ಸುರಿದು ಮತ್ತು ತೊಗಟೆ, ಲವಂಗ, ಹಸಿರು ಏಲಕ್ಕಿ, ಕಪ್ಪು ಏಲಕ್ಕಿ, ಬಿರಿಯಾನಿ ಎಲೆ, ಜಾಯಿಕಾಯಿ ಸೇರಿಸಿ.
ನಂತರ ಕತ್ತರಿಸಿದ ಈರುಳ್ಳಿ, ಧನಿಯಾ ಮೆಣಸಿನಕಾಯಿಗಳನ್ನು ಸೇರಿಸಿ ಮತ್ತು ಈರುಳ್ಳಿ ಗೋಲ್ಡನ್ ಬ್ರೌವ್ನ್ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಬೆಳ್ಳುಳ್ಳಿ ಪೇಸ್ಟ್, ಶುಂಠಿ ಪೇಸ್ಟ್ ಹಾಕಿ ಸೌಟ್ ಆಡಿಸಿ, ಇದಕ್ಕೆ ಮಟನ್ ಪೀಸ್ಗಳನ್ನು ಹಾಕಿ ಹುರಿಯಿರಿ.
ಬಳಿಕ ರುಬ್ಬಿದ ಮೆಣಸಿನಕಾಯಿಯನ್ನು ಹಾಕಿ 5 ನಿಮಿಷ ಬೇಯಿಸಿ. ಜೊತೆಗೆ ಧನಿಯಾ ಪುಡಿ, ಉಪ್ಪು, ತುಪ್ಪ, ಮೊಸರು ಸೇರಿಸಿ, ಮಿಕ್ಸ್ ಮಾಡಿ.
ಈಗ ನೀರು ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ 1 ಗಂಟೆ ಕುದಿಸಿ. ಕೊನೆಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ರಾಜಸ್ಥಾನ್ ಶೈಲಿಯ ಮಟನ್ ಕರಿ ರೆಡಿ.