Tuesday, February 17, 2026
Google search engine

Homeಅಪರಾಧಪಂಕ್ಚರ್ ಆಗಿದ್ದ ಕೆಎಸ್ ಆರ್ ಟಿಸಿ ಬಸ್‌ ನಿಂದ ಕೆಳಗಿಳಿದ ಮಹಿಳೆಗೆ ಲಾರಿ ಡಿಕ್ಕಿ: ಸ್ಥಳದಲ್ಲೇ...

ಪಂಕ್ಚರ್ ಆಗಿದ್ದ ಕೆಎಸ್ ಆರ್ ಟಿಸಿ ಬಸ್‌ ನಿಂದ ಕೆಳಗಿಳಿದ ಮಹಿಳೆಗೆ ಲಾರಿ ಡಿಕ್ಕಿ: ಸ್ಥಳದಲ್ಲೇ ಸಾವು

ಹಿರಿಯೂರು (ಚಿತ್ರದುರ್ಗ): ಟೈಯರ್ ಪಂಕ್ಚರ್ ಆಗಿದ್ದ ಕೆಎಸ್ ಆರ್‌ ಟಿಸಿ ಬಸ್‌ ನಿಂದ ಕೆಳಗೆ ಇಳಿದಿದ್ದ ಮಹಿಳೆಗೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದು ನಡೆದಿದೆ.

ಗಂಗಾವತಿ ತಾಲ್ಲೂಕಿನ ಮಲ್ಲಮ್ಮ (37) ಮೃತ ಮಹಿಳೆ. ತಾಲ್ಲೂಕಿನ ಮದ್ದೇರು ಹಳ್ಳದ ಸಮೀಪ ಈ ಅಪಘಾತ ಸಂಭವಿಸಿದೆ.

ಬೆಂಗಳೂರಿನಿಂದ ಕೊಪ್ಪಳಕ್ಕೆ ಹೊರಟಿದ್ದ ಕೆಎಸ್ ಆರ್‌ ಟಿಸಿ ಬಸ್ ಪಂಕ್ಚರ್ ಆಗಿ ಹೆದ್ದಾರಿಯಲ್ಲಿ ನಿಂತಿತ್ತು. ಟೈರು ಬದಲಾಯಿಸಲು ಚಾಲಕ ಬಸ್ ನಿಲ್ಲಿಸಿದ್ದರು. ಶೌಚ ಕ್ರಿಯೆಗೆ ಕೆಳಗೆ ಇಳಿದಿದ್ದ ಮಹಿಳೆಗೆ ಲಾರಿ ಡಿಕ್ಕಿ ಹೊಡೆದಿದೆ ಎಂದು ಗ್ರಾಮಾಂತರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular