Monday, April 21, 2025
Google search engine

Homeಅಪರಾಧಬೈಕ್ ನಲ್ಲಿ ಬಂದು ವಿಧವೆಯ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಿಸಿದ ವ್ಯಕ್ತಿ

ಬೈಕ್ ನಲ್ಲಿ ಬಂದು ವಿಧವೆಯ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಿಸಿದ ವ್ಯಕ್ತಿ

ಮಂಡ್ಯ: ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ವಿಧವೆಯ ಕತ್ತಿನಲ್ಲಿದ್ದ ಲಕ್ಷಾಂತರ ರು ಮೌಲ್ಯದ ಚಿನ್ನದ ಸರವನ್ನು ಅಪಹರಿಸಿರುವ ಘಟನೆ ಪಟ್ಟಣದ ಲೀಲಾವತಿ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ಜರುಗಿದೆ.

ಬಡಾವಣೆಯ ಲೇಟ್ ಉಮೇಶ್ ಪತ್ನಿ ಪೂರ್ಣಿಮಾ ಅವರ ಕತ್ತಿನಲ್ಲಿದ್ದ ಸುಮಾರು 3 ಲಕ್ಷ ರೂ ಮೌಲ್ಯದ 40 ಗ್ರಾಂ ಚಿನ್ನದ ಸರವನ್ನು ಅಪರಿಚಿತ ವ್ಯಕ್ತಿ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

ವಿಧವೆ ಪೂರ್ಣಿಮಾ ಕೆ.ಎಚ್. ನಗರದ ಸೇಂಟ್ ಅನ್ಸ್ ಕಾನ್ವೆಂಟ್ ಬಳಿ ಇರುವ ತಮ್ಮ ನಾದಿನಿ ಮಗನ ವಿವಾಹ ಹಿನ್ನೆಲೆಯಲ್ಲಿ ಆಕೆಯ ಮನೆಗೆ ತೆರಳಿ ನಾದಿನಿ ಮಗನೊಂದಿಗೆ ಬೈಕ್ ನಲ್ಲಿ ಬಂದು ರಾತ್ರಿ 9:30 ಸುಮಾರಿಗೆ ಲೀಲಾವತಿ ಬಡಾವಣೆ ನಾಲ್ಕನೇ ಕ್ರಾಸಿನಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ ಪೂರ್ಣಿಮಾ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಲೂಟಿ ಮಾಡಿ ಪರಾರಿಯಾಗಿದ್ದಾನೆ.

ಈ ಸಂಬಂಧ ಪೂರ್ಣಿಮಾ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.  ಆರೋಪಿಯ ಪತ್ತೆಗೆ ಅಪರಾಧ ವಿಭಾಗದ ಪೊಲೀಸರ ತಂಡವನ್ನು ರಚಿಸಲಾಗಿದ್ದು . ತಂಡ ಬಡಾವಣೆಯ ಮನೆ ಗಳ ಮುಂಭಾಗದಲ್ಲಿ ಇರುವ ಸಿಸಿಟಿವಿಗಳ  ದೃಶ್ಯಾವಳಿಗಳನ್ನು ಕಲೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಅಲ್ಲದೆ ಈ ಹಿಂದೆ ಸರಗಳತನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.

ಮಂಡ್ಯ ಜಿಲ್ಲಾ ಎರಡನೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಈ ಗಂಗಾಧರ ಸ್ವಾಮಿ. ಡಿವೈಎಸ್ಪಿ ಕೃಷ್ಣಪ್ಪ. ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಗೌಡ. ಮದ್ದೂರು ಠಾಣೆ ವೃತ್ತನಿರೀಕ್ಷಕ ಕೆ .ಆರ್. ಪ್ರಸಾದ್. ಪಿಎಸ್ಐ ಮಂಜುನಾಥ್. ಅಪರಾಧ ವಿಭಾಗದ ಪಿಎಸ್ಐ ಜಮೀರ್ ಅಹ್ಮದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

RELATED ARTICLES
- Advertisment -
Google search engine

Most Popular