Tuesday, April 22, 2025
Google search engine

HomeUncategorizedರಾಷ್ಟ್ರೀಯಕ್ರಿಕೆಟ್ ಆಡುತ್ತಿದ್ದಾಗ ಬಾಲ್ ತಲೆಗೆ ಬಡಿದು ವ್ಯಕ್ತಿ ಸಾವು

ಕ್ರಿಕೆಟ್ ಆಡುತ್ತಿದ್ದಾಗ ಬಾಲ್ ತಲೆಗೆ ಬಡಿದು ವ್ಯಕ್ತಿ ಸಾವು

ಮುಂಬೈ: ಮಾಟುಂಗಾದ ದಾಡ್ಕರ್ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಬಾಲ್ ತಲೆಗೆ ಬಡಿದು 52 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

ಪಕ್ಕದ ಪಿಚ್‌ ನಿಂದ ಬಂದ ಚೆಂಡು ವ್ಯಕ್ತಿಯ ತಲೆಗೆ ಬಡಿದಿದೆ. ಚೆಂಡು ತನ್ನತ್ತ ಸಾಗುತ್ತಿರುವುದನ್ನು ಅವರು ಗಮನಿಸಿಲ್ಲ. ಮೃತ ವ್ಯಕ್ತಿ ಪಕ್ಕದ ಪಿಚ್‌ ನಲ್ಲಿ ಆಡುತ್ತಿದ್ದ ಬ್ಯಾಟರ್‌ ನ ಕಡೆಗೆ ಬೆನ್ನು ಹಾಕಿ ಫೀಲ್ಡಿಂಗ್ ಮಾಡುತ್ತಿದ್ದರು, ಆದ್ದರಿಂದ, ಚೆಂಡು ಅವರ ಕಡೆಗೆ ಬರುವುದನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾದರು ಅಲ್ಲಿ ಅವರು ಮೃತರಾಗಿದ್ದಾರೆಂದು ಘೋಷಿಸಲಾಯಿತು.

50 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಕಚ್ಚಿ ವೀಸಾ ಓಸ್ವಾಲ್ ವಿಕಾಸ್ ಲೆಜೆಂಡ್ ಕಪ್ ಟಿ20 ಪಂದ್ಯಾವಳಿ ನಡೆಸಲಾಗುತ್ತಿದೆ. ಇಲ್ಲಿ ಏಕಕಾಲಕ್ಕೆ ಎರಡು ಪಂದ್ಯಗಳನ್ನು ನಡೆಸಲಾಗುತ್ತದೆ.

RELATED ARTICLES
- Advertisment -
Google search engine

Most Popular