ಹೊಸೂರು : ರೈಸ್ ಮಿಲ್ ಆವರಣದಲ್ಲಿದ್ದ ತೆಂಗಿನ ಮರ ವ್ಯಕ್ತಿವೋರ್ವನ ಮೇಲೆ ಬಿದ್ದು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.
ಗ್ರಾಮದ ಮಹದೇವ್ (೪೨) ಮೃತ ಪಟ್ಟ ದುರ್ದೈವಿ, ಇವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.
ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಗ್ರಾಮದ ಶ್ರೀ ರಾಮ ರೈಸ್ ಮಿಲ್‌ಗೆ ಭತ್ತ ಮಿಲ್ ಮಾಡಿಸಲು ಹೋಗಿದ್ದ ಮಹದೇವ್ ಅಕ್ಕಿ ಮೊಟೆಯನ್ನು ಮೋಟಾರು ಬೈಕ್‌ಗೆ ಇಟ್ಟುಕೊಂಡು ಮನೆಗೆ ತೆರಳುವ ಸಂದರ್ಭದಲ್ಲಿ ಇದ್ದಕ್ಕಿದಂತೆ ತೆಂಗಿನ ಮರ ನೆಲಕ್ಕುಳಿದ್ದರಿಂದ ಮಹದೇವ್ ಮರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ಈ ಘಟನಾ ಸ್ಥಳಕ್ಕೆ ಕೆ.ಆರ್.ನಗರ ಠಾಣೆಯ ಉಪನಿರೀಕ್ಷಕ ಧನರಾಜು , ಎಸ್.ಬಿ ಸಿಬ್ಬಂದಿ ಮಂಜುನಾಥ್ ಬೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.