Saturday, December 20, 2025
Google search engine

Homeರಾಜ್ಯಸುದ್ದಿಜಾಲರೈಲಿನ ಕೆಳಗೆ ಹಾರಿ ವ್ಯಕ್ತಿಯೊಬ್ಬಆತ್ಮಹತ್ಯೆಗೆ ಯತ್ನ ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ರೈಲಿನ ಕೆಳಗೆ ಹಾರಿ ವ್ಯಕ್ತಿಯೊಬ್ಬಆತ್ಮಹತ್ಯೆಗೆ ಯತ್ನ ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಶಿವಮೊಗ್ಗ: ಸಾಗರದ ಚಂದ್ರಮಾವಿನ ಕೊಪ್ಪಲು ಎಂಬಲ್ಲಿ ರೈಲಿನ ಅಡಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಭವಿಸಿದೆ.

ತಾಳಗುಪ್ಪದಿಂದ ಮೈಸೂರಿನತ್ತ ಸಾಗುತ್ತಿದ್ದ ರೈಲು ಚಂದ್ರಮಾವಿನ ಕೊಪ್ಪಲು ಸಮೀಪಿಸುತ್ತಿದ್ದಂತೆ, ಹಳಿಗಳ ಮೇಲೆ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಲೋಕೋ ಪೈಲಟ್ ಸಮಯ ಪ್ರಜ್ಞೆ ಮೆರೆದು ತಕ್ಷಣವೇ ಬ್ರೇಕ್​ ಹಾಕಿ ನಿಲ್ಲಿಸಿದ್ದಾರೆ. ಕೂಡಲೇ ರೈಲನ್ನು ನಿಲ್ಲಿಸಿ ಕೆಳಗಿಳಿದು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ.

ಸ್ಥಳದಲ್ಲಿದ್ದ ಖಾಸಗಿ ಆಂಬ್ಯುಲೆನ್ಸ್ ಮಾಲೀಕ ಗಂಗಾಧರ್ ಅವರ ನೆರವಿನೊಂದಿಗೆ ಗಾಯಾಳುವನ್ನು ತಕ್ಷಣವೇ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. 

RELATED ARTICLES
- Advertisment -
Google search engine

Most Popular