ವರದಿ: ಎಡತೊರೆ ಮಹೇಶ್
ಹೆಚ್. ಡಿ. ಕೋಟೆ : ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದರಿಂದ ತಾಯಿ ಮತ್ತು ಮಕ್ಕಳ ಮರಣವನ್ನು ತಪ್ಪಿಸಬಹುದು ನವಜಾತ ಶಿಶುಗಳಲ್ಲಿ ಆರೋಗ್ಯದಲ್ಲಿ ಏರುಪೇರು ಆದಾಗ ತಕ್ಷಣ ಆಸ್ಪತ್ರೆಗೆ ಹೋಗಬೇಕು ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ ಸಮುದಾಯ ಆಧಾರಿತ ಕಾರ್ಯ ಕ್ರಮಗಳ ವ್ಯವಸ್ಥಾಪಕರಾದ ಕೆ. ವೆಂಕಟಸ್ವಾಮಿ ತಿಳಿಸಿದರು
ಸ್ವಾಮಿ ವಿವೇಕಾ ನಂದ ಯೂತ್ ಮೂವ್ ಮೆಂಟ್ ಸರಗೂರು ಆಶ್ರಯ ಹಸ್ತ ಟ್ರಸ್ಟ್ ಮತ್ತು ಎನ್. ಬೆಳತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರ ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಸಮುದಾಯದ ಸಹಯೋಗದೊಂದಿಗೆ ಸೀಗೂರು ಹಾಡಿಯಲ್ಲಿ ಸೀಮಂತ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ದೀಪಬೆಳಗಿಸಿ ಮಾತನಾಡಿದ ಕೆ. ವೆಂಕಟಸ್ವಾಮಿ ಅವರು, ಗಿರಿಜನರು ಮುಟ್ಟು ನಿಂತ ಮೇಲೆ ಆಸ್ಪತ್ರೆಗೆ ಬಂದು ತೋರಿಸಿಕೊಂಡು ಆ ಸಮಯದಲ್ಲಿಸಿಗಬೇಕಾದ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬೇಕು ಗಿರಿಜನ ಮಹಿಳೆಯರಲ್ಲಿ ಗರ್ಭ ಧರಿಸುವ ಪ್ರತಿಯೊಬ್ಬರಲ್ಲೂ ರಕ್ತ ಹೀನತೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದು ಪ್ರತಿಯೊಬ್ಬರೂ ಹಸಿರು ತರಕಾರಿ ,ಹೊಲದಲ್ಲಿ ಬೆಳೆಯುವ ಸೊಪ್ಪುಬೆಲ್ಲವನ್ನು ಸೇವಿಸಬೇಕು ಹಾಗೆಯೇ ಹೆರಿಗೆ ನೋವು ಕಾಣಿಸಿ ಕೊಂಡ ತಕ್ಷಣದಲ್ಲಿ ತಡ ಮಾಡದೇ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಎನ್. ಬೆಳತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಸುಮಲತಾ, ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವನ್ನು ಕಾಪಾಡಲು ಗರ್ಭಿಣಿ ಸಂದರ್ಭದಲ್ಲಿ ಹೆಚ್ಚಾಗಿ ಮೊಳಕೆ ಕಾಳುಗಳು, ಹಸಿರು ತರಕಾರಿ ಸೊಪ್ಪುಗಳು ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನಬೇಕು ನಿಮ್ಮ ಆರೋಗ್ಯದ ದೃಷಿಯಿಂದ ಸರ್ಕಾರ ಸಂಸ್ಥೆಗಳು ನಿಮಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ 4 ಜನರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯ ಕರ್ತೆ ಅನಿತಾ, ಅಂಗನವಾಡಿ ಕಾರ್ಯಕರ್ತೆ ರುಕ್ಮಿಣಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಮುದಾಯ ಆಧಾರಿತ ಕಾರ್ಯಕ್ರಮಗಳ ಸಂಯೋಜಕರಾದ ಶಿವಲಿಂಗಹ್ಯಾಂಡಪೋಸ್ಟ್, ಆರೋಗ್ಯ ಕಾರ್ಯಕರ್ತರಾದ ಸುರೇಶ್ ಹಾಡಿಯ ಮಹಿಳೆಯರು ಮಕ್ಕಳು ಇದ್ದರು.