ವರದಿ: ಎಡತೊರೆ ಮಹೇಶ್
ಮೈಸೂರು: ಮೈಸೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದ್ಯಸರ ಮಹಾ ಒಕ್ಕೂಟದ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಮತ್ತು ತಾಲೋಕು ಒಕ್ಕೂಟದ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ಶ್ರೀ ಎಸ್ ಎಂ ಕೃಷ್ಣ ರವರು ಮಾಜಿ ಮುಖ್ಯಮಂತ್ರಿ ಗಳು ಇವರ ನಿಧನಕ್ಕೆ 2 ನಿಮಿಷ ಮೌನ ಆಚರಣೆ ಮಾಡಲಾಯಿತು.

ರಾಜ್ಯಸರ್ಕಾರದ ಮುಂದೆ ಒಕ್ಕೂಟ ಇಟ್ಟಿರುವ 28 ಬೇಡಿಕೆಗಳ ಪ್ರಗತಿ ಬಗ್ಗೆ ಸರ್ಕಾರದ ಗ್ರಾಮೀಣ ಅಭಿರುದ್ದಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿರುವ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಯಿತು.
ದಿವಂಗಂತ ಅಬ್ಧುಲ್ ನಜೀರ್ ಸಬ್ ಜಯಂತಿ ಕುರಿತು ಚರ್ಚೆ ಮಾಡಲಾಯಿತು ಹಾಗು ನಮ್ಮ ಒಕ್ಕಟದಲ್ಲಿ ನೂತನವಾಗಿ ಪಂಚಾಯತಿಯ ಅದ್ಯಕ್ಷರಾಗಿ ಆಯ್ಕೆಯಾದವರನ್ನು ಸನ್ಮಾನಿಸಲಾಯಿತು.
ನಮ್ಮ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಎಡತೊರೆ ಮಹೇಶ್ ರವರು ಕೋಟೆ ಮತ್ತು ಸರಗೂರು ತಾಲೂಕಿನ ತಾಲೂಕು ಪತ್ರಕರ್ತರ ಸಂಘಕ್ಕೆ ಉಪಾದ್ಯಕ್ಷರಾಗಿ ಆಯ್ಕೆಯಾಗಿದ್ದರು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮತ್ತು ಪೀಪಲ್ ಟ್ರೀ ಸಂಸ್ಥೆಯ ಮುಖ್ಯಸ್ಥರಾದ ಜವರೇಗೌಡರನ್ನು ಜಿಲ್ಲಾ ಸಮಿತಿವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗುರುಗಳಾದ ರಾಜು ಸರ್ ಮತ್ತು ರಾಜ್ಯ ಜಿಲ್ಲಾ ತಾಲೋಕು ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿ ಹಲವಾರು ವಿಚಾರಗಳನ್ನು ಚರ್ಚಿಸಿದರು.
ಸಭೆಯಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರಾದ ನಾಗರಾಜ್ ರಾಜ ಹುಣಸೂರು ಸೇರಿದಂತೆ ಪದಾಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು ಭಾಗವಹಿಸಿದರು.