Friday, April 18, 2025
Google search engine

Homeರಾಜ್ಯಸುದ್ದಿಜಾಲಕಾವೇರಿ ಜಲಪಾತೋತ್ಸವ ಹಿನ್ನೆಲೆಯಲ್ಲಿ ಚುಂಚನಕಟ್ಟೆಯ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳ ಸಭೆ

ಕಾವೇರಿ ಜಲಪಾತೋತ್ಸವ ಹಿನ್ನೆಲೆಯಲ್ಲಿ ಚುಂಚನಕಟ್ಟೆಯ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳ ಸಭೆ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ನ.೩೦ ಮತ್ತು ಡಿ.೧ ರಂದು ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿ ಕೇಂದ್ರದಲ್ಲಿ ಎರಡು ದಿನಗಳ ಕಾಲ ಕಾವೇರಿ ಜಲಪಾತೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಹೆಚ್.ವಿ.ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಚುಂಚನಕಟ್ಟೆಯ ಪ್ರವಾಸಿಮಂದಿರದಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಉಪ ವಿಭಾಗಾಧಿಕಾರಿಗಳು ಕಾರ್ಯಕ್ರಮ ನಡೆಯುವ ಶ್ರೀರಾಮ ದೇವಾಲಯದ ಆವರಣ ಮತ್ತು ಬಸವನ ವೃತದಲ್ಲಿ ಸ್ವಚ್ಚತೆ ಕಾಪಾಡಿ ವಿದ್ಯುತ್ ದೀಪಾಲಂಕಾರವನ್ನು ಮಾಡುವುದರ ಜತೆಗೆ ಕುಡಿಯುವ ನೀರು ಹಾಗೂ ಸೂಕ್ತ ಮೊಬೈಲ್ ಶೌಚಾಲಯದ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮ ತಡ ರಾತ್ರಿಯವರೆಗೂ ನಡೆಯುವುದರಿಂದ ಕೆಎಸ್‌ಆರ್‌ಟಿಸಿಯವರು ಅಗತ್ಯ ಬಸ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಈ ಸಂಬoಧ ನನಗೆ ವರದಿ ನೀಡಬೇಕೆಂದು ತಾಕೀತು ಮಾಡಿದರಲ್ಲದೆ ಅಧಿಕಾರಿಗಳು ತಂಡ ರಚನೆ ಮಾಡಿಕೊಂಡು ಸಮನ್ವಯತೆಯಿಂದ ಕೆಲಸ ನಿರ್ವಹಿಸಿ ಕಾರ್ಯಕ್ರಮದ ಯಶಸ್ವಿಗೆ ದುಡಿಯಬೇಕೆಂದು
ಸೂಚಿಸಿದರು.

ಪ್ರಮುಖವಾಗಿ ವ್ಯವಸ್ಥಿತವಾದ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ ಈ ವಿಚಾರದಲ್ಲಿ ಯಾವುದೇ ತೊಂದರೆಯಾಗದAತೆ ನೋಡಿಕೊಳ್ಳಬೇಕು ಹಾಗೂ ಕುಪ್ಪೆ ಗ್ರಾಮ ಪಂಚಾಯತಿ ಯವರು ಹೆಚ್ಚುವರಿ ನಲ್ಲಿಗಳನ್ನು ಅಳವಡಿಸಿ ಸಮರ್ಪಕವಾಗಿ ನೀರು ಸರಬರಾಜು ಮಾಡಿ ಇದರೊಂದಿಗೆ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಆದೇಶಿಸದ ಅವರು ವಿಚಾರದಲ್ಲಿ ಯಾವುದೇ ದೂರುಗಳು ಕೇಳಿ ಬರಬಾರದು ಎಂದು ಹೇಳಿದರು.

ಚುಂಚನಕಟ್ಟೆ ಮುಖ್ಯ ವೃತದಿಂದ ದೇವಾಲಯದ ವರೆಗೆ ಸಂಪೂರ್ಣವಾಗಿ ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಅಲಂಕಾರ ಮಾಡಿ ಪಿಡಿಒ ಸ್ಥಳದಲ್ಲಿಯೇ ಎರಡು ದಿನ ಮೊಕ್ಕಾಂ ಮಾಡಿ ಉಸ್ತುವಾರಿ ವಹಿಸಬೇಕೆಂದರಲ್ಲದೆ ಯಾವುದೇ ಸಮಸ್ಯೆ ದೂರುಗಳು ಇದ್ದರೂ ನನಗೂ ಮತ್ತು ಎರಡು ತಾಲೂಕುಗಳ ತಹಶಿಲ್ದಾರರ ಗಮನಕ್ಕೆ ತರಬೇಕೆಂದು ನುಡಿದರು.

ಮದ್ಯ ಮಾರಾಟ ಬಂದ್: ಜಲಪಾತೋತ್ಸವ ನಡೆಯುವ ಎರಡು ದಿನಗಳು ಚುಂಚನಕಟ್ಟೆಯಲ್ಲಿ ಮದ್ಯ
ಮಾರಾಟ ಬಂದ್ ಮಾಡಿ ಜಿಲ್ಲಾಧಿಕಾರಿ ಗಳು ಆದೇಶ ಹೊರಡಿಸಿದ್ದಾರೆ ಎಂದು ಉಪವಿಭಾಗಧಿಕಾರಿಗಳು
ಪ್ರಕಟಿಸಿದರು.

ಅನಂತರ ಅವರು ಇಲಾಖಾವಾರು ಅಧಿಕಾರಿಗಳಿಗೆ ಪ್ರತ್ಯೇಕ ನಿರ್ದೇಶನ ನೀಡಿ ಜವಬ್ದಾರಿಯಿಂದ ತಮಗೆ
ವಹಿಸಿದ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಬೇಕೆಂದರು. ಈ ಸಂದರ್ಭದಲ್ಲಿ ಅವರು ವೇದಿಕೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.

ತಹಶೀಲ್ದಾರರಾದ ಎಂ.ಎಸ್.ಯದುಗಿರೀಶ್, ಜಿ.ಸುರೇಂದ್ರಮೂರ್ತಿ, ಎನ್.ಎಸ್.ನರಗುಂದ್, ಗ್ರೇಡ್-೨
ತಹಶೀಲ್ದಾರರಾದ ಚಂದ್ರಶೇಖರ್, ಸಣ್ಣರಾಮಪ್ಪ, ಉಪತಹಶೀಲ್ದಾರ್ ಕೆ.ಜೆ.ಶರತ್‌ಕುಮಾರ್, ತಾ.ಪಂ ಇಒ
ವಿ.ಪಿ.ಕುಲದೀಪ್, ಪಿಡಿಒ ರಾಜೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್, ಪೊಲೀಸ್ ಇನ್ಸ್ಪೆಕ್ಟರ್
ಕೃಷ್ಣರಾಜು, ಜಲಸಂಪನ್ಮೂಲ ಇಲಾಖೆಯ ಇಇ ಕುಶಕುಮಾರ್, ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಚೆಸ್ಕಾಂ ಎಇ ಅರ್ಕೇಶ್ ಮೂರ್ತಿ, ಆಹಾರ ಇಲಾಖೆಯ ಶಿರಸ್ತೇದ್ದಾರ್
ಮಂಜುನಾಥ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

“ನೋಟಿಸ್ ನೀಡಲು ಸೂಚನೆ” ಚುಂಚನಕಟ್ಟೆಯಲ್ಲಿ ನಡೆದ ಜಲಪಾತೋತ್ಸವ ಕಾರ್ಯಕ್ರಮದ ಪೂರ್ವಭಾವಿ
ಸಭೆಗೆ ಗೈರು ಹಾಜರಾದ ಪಶು ಸಂಗೋಪನ ಇಲಾಖೆಯ ಆಡಳಿತ ವಿಭಾಗದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮಂಜುನಾಥ್ ಅವರಿಗೆ ನೋಟೀಸ್ ನೀಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ತಹಸೀಲ್ದಾರ್
ಜಿ.ಸುರೇಂದ್ರಮೂರ್ತಿಯವರಿಗೆ ಉಪ ವಿಭಾಗಾಧಿಕಾರಿ ಹೆಚ್.ಬಿ.ವಿಜಯಕುಮಾರ್ ಆದೇಶಿಸಿದರು.

RELATED ARTICLES
- Advertisment -
Google search engine

Most Popular