ಯಾದಗಿರಿ: ಕಾಶ್ಮಿರದಲ್ಲಿ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ, ಬೆಂಗಳೂರಿನ ಭರತ್ ಭೂಷಣ್ ಪ್ರವಾಸದ ವೇಳೆ ಉಗ್ರರಿಂದ ಹತರಾಗಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು. ಯಾದಗಿರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಮಾತನಾಡುತ್ತಾ, ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಹತರಾಗಿರುವುದು ಆಘಾತಕಾರಿ ಎಂದರು. ಮಂಜುನಾಥನ ಪತ್ನಿ ಕಣ್ಣೆದುರು ಆತಂಕರನ್ನು ಅನುಭವಿಸಿದ ಘಟನೆ ಅತ್ಯಂತ ಮನಕಲಕುವದು ಎಂದು ಅವರು ಹೇಳಿದರು.
ಶ್ರೀರಾಮುಲು, ಉಗ್ರರನ್ನು “ನಾಲಾಯಕರು, ಸೈಕೋಗಳು” ಎಂದು ವಿವರಣೆ ನೀಡುತ್ತಾ, ಅವರು 28 ಮಂದಿಯನ್ನು ಕ್ರೂರವಾಗಿ ಕೊಂದಿದ್ದು ರಾಕ್ಷಸೀಯ ವರ್ತನೆಯಾಗಿದೆ ಎಂದರು. ಪಾಕಿಸ್ತಾನ ಸೈನ್ಯದಿಂದ ಸೋತು, ಉಗ್ರರ ಮೂಲಕ ಭಾರತೀಯ ಜನತೆಗೆ ತೊಂದರೆ ನೀಡುತ್ತಿದೆ ಎಂದು ಕಟುವಾಗಿ ಟೀಕಿಸಿದರು.
1948 ರಲ್ಲಿ ಗಟ್ಟಿಯಾದ ನಿರ್ಧಾರ ತೆಗೆದುಕೊಂಡಿದ್ದರೆ ಭಾರತ ವಿಭಜನೆಯಾಗುತ್ತಿರಲಿಲ್ಲ. ಅಂದಿನ ರಾಜಕೀಯ ತಪ್ಪುಗಳು ಇಂದಿನ ಸಂಕಷ್ಟಕ್ಕೆ ಕಾರಣವೆಂದು ಹೇಳಿದರು. ಧ್ವಂಸವಾದ 370ನೇ ವಿಧಿಯ ಕುರಿತು ಮಾತನಾಡಿದ ಅವರು, ಪ್ರಧಾನಿ ಮೋದಿ ಈ ವಿಧಿಯನ್ನು ರದ್ದುಗೊಳಿಸಿ ಜನತೆಗೆ ನ್ಯಾಯ ನೀಡಿದ್ದಾರೆ ಎಂದರು.
ಭಾರತದ ಭವಿಷ್ಯಕ್ಕಾಗಿ ಮನೆಗೊಂದು ಸೈನಿಕ ಬೇಕೆಂಬ ಆವಶ್ಯಕತೆಯಿದೆ. ಪಾಲಕರು ತಮ್ಮ ಮಕ್ಕಳಲ್ಲಿ ಒಬ್ಬರನ್ನು ದೇಶದ ರಕ್ಷಣೆಗೆ ಕಳುಹಿಸಬೇಕು ಎಂದು ವಿನಂತಿಸಿದರು.