ನಾಗ್ಪುರ: ಮುಂಬೈನಿಂದ ರಾಂಚಿಗೆ ಹೋಗುತ್ತಿದ್ದ ಇಂಡಿಗೊ ವಿಮಾನದಲ್ಲಿ ೬೨ ವರ್ಷದ ಪ್ರಯಾಣಿಕರೊಬ್ಬರು ರಕ್ತ ವಾಂತಿ ಮಾಡಿಕೊಂಡು ಮೃತಪಟ್ಟ ಘಟನೆ ವರದಿಯಾಗಿದೆ.
ಪ್ರಯಾಣಿಕನ ಆರೋಗ್ಯಸ್ಥಿತಿಯ ಹಿನ್ನೆಲೆಯಲ್ಲಿ ವಿಮಾನವನ್ನು ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ತಿಳಿಸಬೇಕಾಯಿತು.
ನಾಗ್ಪುರ ವಿಮಾಣ ನಿಲ್ದಾಣದಲ್ಲಿ ತುರ್ತು ಆರೋಗ್ಯ ಚಿಕಿತ್ಸೆಗಾಗಿ ನಿಯೋಜಿಸಿದ್ದ ಕಿಮ್ಸ್-ಕಿಂಗ್ಸ್ವೇ ಆಸ್ಪತ್ರೆಯ ವೈದ್ಯಕೀಯ ತಂಡ ಪ್ರಯಾಣಿಕನ ತಪಾಸಣೆ ನಡೆಸಿದರು.
ವಿಮಾನದಲ್ಲಿ ರಕ್ತ ವಾಂತಿ ಮಾಡಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಆತ ಮೃತಪಟ್ಟಿದ್ದನ್ನು ವೈದ್ಯರು ಘೋಷಿಸಿದರು. ಮುಂದಿನ ವಿಧಿವಿಧಾನಗಳಿಗಾಗಿ ದೇಃವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಸಾಗಿಸಲಾಯಿತು.
ಕಳೆದ ಒಂದು ವಾರದಲ್ಲಿ ವಿಮಾನ ಪ್ರಯಾಣಿಕರನ್ನು ಮೃತ ಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಿದ ಎರಡನೇ ಪ್ರಕರಣ ಇದಾಗಿದೆ. ಕಳೆದ ವಾರ ೪೦ ವರ್ಷದ ಇಂಡಿಗೊ ಪೈಲಟ್ ಒಬ್ಬ ನಾಗ್ಪುರ- ಪುಣೆ ವಿಮಾನಕ್ಕೆ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಭದ್ರತಾ ತಪಾಸಣೆ ಪ್ರದೇಶದಲ್ಲಿ ಮೃತಪಟ್ಟಿದ್ದರು.