ಬೆಳಗಾವಿ : ಬಿಸಿಲಿನ ತಾಪಕ್ಕೆ ಹೈರಾಣರಾಗಿ ಬಾವಿಯಲ್ಲಿ ಈಜಲು ಹೋಗಿ ಯುವಕ ಮೃತಪಟ್ಟ ಘಟನೆ ಅನಂತಪೂರ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅನಂತಪೂರ ಗ್ರಾಮದ ಶಿವಾನಂದ ಮೇತ್ರಿ (೨೧) ಸಂಜೆ ೪ರ ವೇಳೆ ಮನೆಯಲ್ಲಿ ಹೇಳದೆ ಈಜಲು ಹೋಗಿದ್ದಾನೆ. ರಾತ್ರಿಯಾದರು ಮನೆಗೆ ಬಾರದ ಹಿನ್ನಲೆ ಪೋಷಕರು ಭಯ ಪಟ್ಟು, ಎಲ್ಲೆಡೆ ಹುಡುಕಲು ಆರಂಭಿಸಿದ್ದಾರೆ. ಆದ್ರೆ ಇಂದು ಬೆಳಗ್ಗೆ ಮತ್ತೆ ಹುಡುಕಾಟ ನಡೆಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಶವವನ್ನು ಹೊರತೆಗೆಯಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನೂ ಮುಂದೆ ಯಾರೂ ಈಜಲು ಹೋಗದಂತೆ ತಿಳಿಸಿದ್ದಾರೆ.