ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹೊನ್ನಾಪುರ ಗ್ರಾಮದಲ್ಲಿ ಶನಿವಾರ ತಡರಾತ್ರಿ ಹುಲಿ ದಾಳಿಗೆ ನಾಯಿಯೊಂದು ಬಲಿಯಾಗಿದೆ.
ಗ್ರಾಮದ ನಿವಾಸಿ ಕರಿಯಯ್ಯ ಎಂಬುವರಿಗೆ ಸೇರಿದ ನಾಯಿಯಾಗಿದೆ. ಇವರು ತಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಶನಿವಾರ ರಾತ್ರಿ ಮನೆಯ ಬಳಿಕಟ್ಟಿ ಹಾಕಿದ್ದ ನಾಯಿಯ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ, ಕಿರುಚಾಟದ ಶಬ್ದವನ್ನು ಕೇಳಿ ಆಚೆ ಬಂದಂತಹ ಕುಟುಂಬದವರು ಹುಲಿಯನ್ನು ನೋಡಿ ಗಾಬರಿಗೊಂಡಿದ್ದಾರೆ.

ಇದೆ ವೇಳೆ ಕರಿಯಯ್ಯ ರವರ ಮಗ ತಿಲಕ್ ಎಂಬುವರು ಹುಲಿ ಹಾದು ಹೋಗುತ್ತಿರುವುದನ್ನು ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಘಟನೆಯ ಬಗ್ಗೆ ವಿಚಾರ ತಿಳಿಯುತ್ತಿದ್ದಂತೆ ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿ ಸೆರೆ ಹಿಡಿಯಲು ಬೋನ್ ವ್ಯವಸ್ಥೆ ಮಾಡಿದ್ದಾರೆ.