ಮಾನವೀಯತೆ ಮೆರೆದ ಪೆಟ್ರೋಲ್ ಬಂಕ್ ಮಾಲೀಕ
ಮಂಡ್ಯ: ಒಂದು ಲಕ್ಷ ರೂಪಾಯಿ ಹಣವನ್ನು ಬೀಳಿಸಿಕೊಂಡು ಹೋಗಿದ್ದ ಗ್ರಾಹಕನಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ಹಾಗೂ ಮಾಲೀಕರು ಮರಳಿ ನೀಡಿ, ಮಾನವೀಯತೆ ಮೆರೆದಿರುವ ಘಟನೆ ಮಂಡ್ಯನಗರದ ನೂರಡಿ ರಸ್ತೆಯ ಜನನಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.
ಕಾರಿಗೆ ಡೀಸೆಲ್ ಹಾಕಿಸಲು ಬಂದ ವ್ಯಕ್ತಿಯೊಬ್ಬರು, ಅವಸರದಲ್ಲಿ ಒಂದು ಲಕ್ಷ ಹಣವನ್ನು ಬೀಳಿಸಿಕೊಂಡು ಹೋಗಿದ್ದರು, ಈ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿ ರವಿ ಕಾರಸವಾಡಿ ಎನ್ನುವವರಿಗೆ ಈ ಹಣ ಸಿಕ್ಕಿತ್ತು, ಆನಂತರ ಈ ವಿಚಾರವನ್ನು ಪೆಟ್ರೋಲ್ ಬಂಕ್ ಮಾಲೀಕರ ಭಕ್ತವತ್ಸಲ ಅವರಿಗೆ ತಿಳಿಸಿ, ಆ ಹಣವನ್ನು ಅವರ ಬಳಿ ಕೊಟ್ಟಿದ್ದರು.
ಆ ನಂತರ ಹಣ ಕಳೆದುಕೊಂಡಿದ್ದ ವ್ಯಕ್ತಿಯನ್ನು ಪೆಟ್ರೋಲ್ ಬಂಕ್ ಬಳಿ ಕರೆಸಿ, ಸಿ ಸಿ ಟಿವಿ ವಿಡಿಯೋಗಳನ್ನು ಪರಿಶೀಲಿಸಿ ಹಣ ಬೀಳಿಸಿಕೊಂಡು ಹೋದ ವ್ಯಕ್ತಿ ಆತನೇ ಎಂಬುದನ್ನು ಖಚಿತಪಡಿಸಿಕೊಂಡು, ಹಲವು ಮುಖಂಡರ ಸಮ್ಮುಖದಲ್ಲಿ ಒಂದು ಲಕ್ಷ ರೂ. ಹಣವನ್ನು ಅವರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದರು..

ಹಣ ಸಿಕ್ಕ ಖುಷಿಯಲ್ಲಿ ಆ ವ್ಯಕ್ತಿಯು ಪೆಟ್ರೋಲ್ ಬಂಕ್ ಸಿಬ್ಬಂದಿ ರವಿಗೆ ಒಂದು ಸಾವಿರ ರೂ. ಬಹಮಾನ ನೀಡಿ ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಮಾಲೀಕ ಭಕ್ತವತ್ಸಲ, ಜನಸ್ಪಂದನ ಟ್ರಸ್ಟ್ ನ ನಾಗರತ್ನ, ಹೇಮಾ. ಮೂರ್ತಿ ಹಾಗೂ ರಘು ಇನ್ನಿತರರಿದ್ದರು.