ಮೈಸೂರು: ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಕುವೆಂಪುನಗರದ ಗಾನಭಾರತೀ ರಮಾಗೋವಿಂದ್ ಕಲಾ ವೇದಿಕೆಯಲ್ಲಿ ೧೮೪ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಜರುಗಿತು.
ಮಾಜಿ ಶಾಸಕ ಹಾಗೂ ಅಸೋಸಿಯೇಷನ್ ಗೌರವ ಅಧ್ಯಕ್ಷ ಎಂ.ಕೆ.ಸೋಮಶೇಖರ್ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಛಾಯಾಗ್ರಹಣ ಎಂದರೇ ಕೇವಲ ಛಾಯಾಚಿತ್ರ ತೆಗೆಯುವುದಷ್ಟೇ ಅಲ್ಲ. ಅದೊಂದು ಸೃಜನಾತ್ಮಕ ಕಲೆ. ಸಾವಿರ ಚಿತ್ರಪಟಗಳನ್ನು ತೆಗೆಯಬಹುದು. ಆದರೆ, ಕೇವಲ ಒಂದು ಚಿತ್ರ ಸಾವಿರ ಪದಗಳನ್ನು ತಿಳಿಸುವಂತಹ ಸಾಮರ್ಥ್ಯ ಹೊಂದಿದೆ. ಪ್ರತೀ ಚಿತ್ರದಲ್ಲೂ ಒಂದು ಶಿಸ್ತು, ನಗು, ಭಾವನೆಯ ರಸದೌತಣವಿರುತ್ತದೆ. ಆಗಾಗೀ ಛಾಯಾಗ್ರಾಹಕ ವೃತ್ತಿಯಲ್ಲಿ ಯಶಸ್ವಿಯಾಗಬೇಕಾದರೆ ಶಿಸ್ತು, ತಾಳ್ಮೆ ಅತ್ಯವಶ್ಯಕವಾಗುತ್ತದೆ. ಛಾಯಾಗ್ರಾಹಕ ವೃತ್ತಿಯನ್ನು ನಂಬಿ ಸಮಾಜದಲ್ಲಿ ಕೆಟ್ಟವರು ಯಾರು ಇಲ್ಲ. ಬದಲಾಗಿ ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿದ್ದೇ ಹೆಚ್ಚು ಎಂದರು.
ಇವತ್ತಿನ ದಿನಮಾನದಲ್ಲಿ ದೊಡ್ಡ ದೊಡ್ಡ ಆಗರ್ಭ ಶ್ರೀ ಮಂತರೂ ಸಹ ಛಾಯಾಗ್ರಹಣವನ್ನು ಹೆಚ್ಚು ಪ್ರೀತಿಸುತ್ತಾರೆ. ಏಕೆಂದರೆ ಅದು ವ್ಯಕ್ತಿತ್ವ ವಿಕಸನ, ಶಿಸ್ತು, ಸಮಾಜದಲ್ಲಿ ಅತ್ಯುತ್ತಮ ಗೌರವ ತಂದುಕೊಡುವುದರೊಂದಿಗೆ ಆರ್ಥಿಕವಾಗಿ ಸಬಲರಾಗಲು ಸಹ ನೆರವು ನೀಡುತ್ತದೆ. ಆಗಾಗಿ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗ್ರಾಹಕರನ್ನು ಸೆಳೆಯುವಲ್ಲಿ ಪ್ರಯತ್ನಿಸಿ ಎಂದು ತಿಳಿಸಿದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ರವಿ ಕಾಣದನ್ನ ಕವಿ ಕಂಡ ಕವಿ ಕಾಣದನ್ನ ರವಿ ಕಂಡ ಎನ್ನುವುದಕ್ಕಿಂದ ಇವರಿಬ್ಬರು ಕಾಣದ್ದನ್ನು ಕ್ಯಾಮರಾಮ್ಯಾನ್ ಕಂಡ. ಅಂತಹ ಶಕ್ತಿ ಛಾಯಾಗ್ರಹಣಕ್ಕಿದೆ. ವಿಶ್ವದ ಎಲ್ಲೆಡೆ ಏನೇ ನಡೆದರು ಕೂತಲ್ಲೇ ನೋಡುವಂತಹ ಅಧ್ಭುತವಾದ ಶಕ್ತಿ ಕ್ಯಾಮರಕ್ಕಿದೆ. ಛಾಯಾಗ್ರಾಹಕರಿಲ್ಲದೆ ಮದುವೆಯೂ ಕೂಡ ನಡೆಯದಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಆಗಾಗಿ ಇವತ್ತಿನ ತಂತ್ರಜ್ಞಾನ ಸದ್ಬಳಕೆ ಮಾಡಿಕೊಂಡು ಯಶಸ್ವಿ ಛಾಯಾಗ್ರಾಹಕರಾಗಿ ಹೊರಹೊಮ್ಮಬಹುದು ಎಂದು ತಿಳಿಸಿದರು.
ಇದೇ ವೇಳೆ ಹಿರಿಯ ಛಾಯಾಗ್ರಹಕರಾದ ಎಂ.ಎನ್.ವಿ.ಆನಂದ್, ಸಿ.ಅಭಿನಂದನ್, ಎ.ಎಸ್.ಉಮೇಶ್, ಪ್ರವೀಣ್ ಕುಮಾರ್ ವಿಜನ್, ಮಲ್ಲೇಶ್.ಎಂ, ಅನಿಲ್ ಕುಮಾರ್.ಪಿ.ವಿ, ವಿಜಯ್ ಕುಮಾರ್, ಮಂಜುನಾಥ್, ರಾಮಸ್ವಾಮಿ, ಕೆ.ಎಸ್.ಲೋಕೇಶ್, ಸುಧೀರ್, ಮುರುಳೀಧರ್, ಶ್ರೀನಿವಾಸ್ ಅವರುಗಳನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಸಂಘದ ಅಧ್ಯಕ್ಷ ದಡದಹಳ್ಳಿ ಮಹೇಶ್, ಕಾರ್ಯದರ್ಶಿ ಸುದರ್ಶನ್, ಸಹ ಕಾರ್ಯದರ್ಶಿ ಆರ್.ಪ್ರಮೋದ್, ಖಜಾಂಚಿ ಲೋಕೇಶ್.ಎಂ, ಆರೋಗ್ಯ ನಿಧಿ ಛೇರ್ಮನ್ ಶಿವಕುಮಾರ್.ಹೆಚ್.ಎನ್, ಜನಸಂಪರ್ಕಾಧಿಕಾರಿ ಮಂಜುನಾಥ್, ನಿರ್ದೇಶಕರಾದ ಮೋಹನ್, ಚೈತನ್ಯ ರಾವ್, ರವಿಚಂದ್ರ.ಜೆ, ಮಂಜುನಾಥ್, ಉಮೇಶ್.ಕೆ, ಎಂ.ಎಸ್.ಕಾಂತರಾಜು ಮತ್ತಿತರರು ಉಪಸ್ಥಿತರಿದ್ದರು.