Tuesday, December 30, 2025
Google search engine

Homeಕಾಡು-ಮೇಡುಭದ್ರಾ ಅಭಯಾರಣ್ಯದಲ್ಲಿ ಇಪ್ಪತ್ತು ವರ್ಷಗಳ ನಂತರ ಅಪರೂಪದ ಕಪ್ಪು ಚಿರತೆ ಗೋಚರ

ಭದ್ರಾ ಅಭಯಾರಣ್ಯದಲ್ಲಿ ಇಪ್ಪತ್ತು ವರ್ಷಗಳ ನಂತರ ಅಪರೂಪದ ಕಪ್ಪು ಚಿರತೆ ಗೋಚರ

 ಚಿಕ್ಕಮಗಳೂರು : ಭದ್ರಾ ಅಭಯಾರಣ್ಯದಲ್ಲಿ ಅಪರೂಪದ ಕಪ್ಪು ಚಿರತೆ ಕಾಣಿಸಿಕೊಂಡಿದ್ದು ಬ್ಲ್ಯಾಕ್ ಪ್ರವಾಸಿಗರಲ್ಲಿ ಸಂತಸ ಮೂಡಿಸಿದೆ. ಸುಮಾರು ಇಪ್ಪತ್ತು ವರ್ಷಗಳ ನಂತರ ಭದ್ರಾ ಅಭಯಾರಣ್ಯದಲ್ಲಿ ಬ್ಲ್ಯಾಕ್ ಪ್ಯಾಂಥರ್ ಪತ್ತೆಯಾಗಿರುವುದು ವಿಶೇಷ.

ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ಬ್ಲ್ಯಾಕ್ ಪ್ಯಾಂಥರ್ ಮತ್ತು ಚಿರತೆ ಸೆರೆಯಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಪ್ಪು ಚಿರತೆಯನ್ನು ನೋಡಿ ಪ್ರವಾಸಿಗರು ಫಿದಾ ಆಗಿದ್ದು, ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಂತಸಪಟ್ಟಿದ್ದಾರೆ. ಕಳೆದ ಎರಡು ದಶಕಗಳಿಂದ ಅರಣ್ಯಾಧಿಕಾರಿಗಳು, ವಾಚರ್‌ಗಳು ಮತ್ತು ಗಾರ್ಡ್‌ಗಳಿಗೂ ಕಾಣಿಸಿಕೊಳ್ಳದ ಈ ಕಪ್ಪು ಚಿರತೆ, ಕಳೆದೊಂದು ವಾರದಲ್ಲಿ ಹಲವು ಬಾರಿ ಪ್ರತ್ಯಕ್ಷವಾಗಿದೆಯಂತೆ. 

ಈ ಬ್ಲ್ಯಾಕ್ ಪ್ಯಾಂಥರ್‌ನ್ನು ಸಾಮಾನ್ಯವಾಗಿ ಕಪ್ಪು ಚಿರತೆ ಎಂದೇ ಕರೆಯುತ್ತಾರೆ. ಈ ಅಪರೂಪದ ಪ್ರಾಣಿಯ ಗೋಚರ ಭದ್ರಾ ಅಭಯಾರಣ್ಯದ ಜೀವವೈವಿಧ್ಯದ ಶ್ರೀಮಂತಿಕೆಗೆ ಮತ್ತಷ್ಟು ಮೆರುಗು ನೀಡಿದೆ. ವರ್ಷಪೂರ್ತಿ ನಿರಂತರವಾಗಿ ಮಳೆಯಾಗಿರುವುದರಿಂದ ಅರಣ್ಯ ಪ್ರದೇಶ ಸಮೃದ್ಧವಾಗಿದೆ. ಹಾಗಾಗಿ ಬ್ಲ್ಯಾಕ್ ಪ್ಯಾಂಥರ್ ಗೋಚರವಾಗಿದೆ ಎಂದು ಹೇಳಲಾಗಿದೆ.

RELATED ARTICLES
- Advertisment -
Google search engine

Most Popular