ಮಂಡ್ಯ: ಮೃತ ಮಂಗನಿಗೆ ದೊಡ್ಡ ಬೋಗನಹಳ್ಳಿ ಗ್ರಾಮಸ್ಥರು ತಿಥಿ ಕಾರ್ಯ ಮಾಡಿರುವ ಅಪರೂಪದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ದೊಡ್ಡ ಬೋಗನಹಳ್ಳಿ ಗ್ರಾಮದಲ್ಲಿ ಸೆ. 25 ರಂದು ಆಕಸ್ಮಿಕವಾಗಿ ಮರದಿಂದ ಬಿದ್ದು ಮಂಗ ಮೃತಪಟ್ಟಿತ್ತು.

ಮೃತ ಮಂಗನ ಅಂತ್ಯ ಸಂಸ್ಕಾರವನ್ನು ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ಮಾಡಿದ್ದರು. ಬಳಿಕ ಇಂದು 11 ದಿನದ ತಿಥಿಕಾರ್ಯ ನೆರವೇರಿಸಿ ಊರ ಜನ ಮಾನವೀಯತೆ ಮೆರೆದಿದ್ದಾರೆ.
ಮಂಗನ ಸಮಾಧಿಗೆ ಎಡೆ ಇಟ್ಟು, ಪೂಜೆ ಸಲ್ಲಿಸಿ ಜನರಿಗೆ ಅನ್ನ ಸಂತರ್ಪಣೆ ನಡೆಸಿದ್ದಾರೆ.