Thursday, April 3, 2025
Google search engine

Homeಸಿನಿಮಾಅಪರೂಪದ ಕ್ಷಣ..ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ಭೇಟಿ

ಅಪರೂಪದ ಕ್ಷಣ..ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ಭೇಟಿ

ಬಾಲ್ಯದ ದಿನಗಳಿಗೆ ಜಾರಿದ ಅಣ್ಣ ತಂಗಿ..!

ಅಭಿ ಮದುವೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ..ಹೇಗಿದೆ ಗೊತ್ತಾ ಅಣ್ಣ-ತಂಗಿ ಬಾಂಧವ್ಯ?

ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ..ಈ ಇಬ್ಬರು ಚಿತ್ರರಂಗದ ತಾರೆಯರು. ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣ-ತಂಗಿ..ಆದರೆ ಇಲ್ಲಿವರೆಯೂ ವಿನೋದ್ ಆಗಲಿ..ಸೌಂದರ್ಯ ಆಗಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ..ಒಬ್ಬರನ್ನೊಬ್ಬರ ಭೇಟಿಯಾಗಿಲ್ಲ. ಅಂತಹ ಸನ್ನಿವೇಶ ನಿರ್ಮಾಣವಾಗಿಲ್ಲ ಅಂತೇನಲ್ಲ..ಒಟ್ಟಿಗೆ ಆಡುತ್ತಾ ಬೆಳೆದ ಇವರಿಬ್ಬರು ಈ ಅಣ್ಣ ತಂಗಿ ಬದಲಾದ ಸನ್ನಿವೇಶದಲ್ಲಿ ದೂರ ಉಳಿದಿದ್ದೂ ಬಿಟ್ರೆ, ಅವರ ನಡುವೆ ಗಾಂಧಿನಗರ ಮಾತಾಡಿಕೊಳ್ಳುವ ರೀತಿ ಸಂಬಂಧವೇನು ಅಳಸಿಲ್ಲ.

ವಿನೋದ್ ಹಾಗೂ ಸೌಂದರ್ಯ ಇಂದಿಗೂ..ಎಂದೆಂದಿಗೂ ಅಣ್ಣ ತಂಗಿಯೇ..ಆದ್ರೆ ಅವರಿಬ್ಬರನ್ನು ಅವರ ಅಕ್ಕ-ಪಕ್ಕದವರು ಭೇಟಿ ಮಾಡಲಾಗದಂತೆ ನೋಡಿಕೊಂಡಿದ್ದರು ಅನ್ನೋದೇ ವಿಪರ್ಯಾಸ..ಆದ್ರೆ ಸಮಯ-ಸಂದರ್ಭ ಇದೆಲ್ಲಾ ಸಂಬಂಧಗಳನ್ನು ಮತ್ತೆ ಬೆಸೆಯುವಂತೆ ಮಾಡಿದೆ.

ಮೊನ್ನೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ನಡೆದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ ಆರತಕ್ಷಣೆಯಲ್ಲಿ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ಮುಖಾಮುಖಿಯಾಗಿದ್ದಾರೆ. ಬಹಳ ವರ್ಷದ ಬಳಿಕ ತಂಗಿ ನೋಡಿದ ಖುಷಿ ವಿನೋದ್ ಅವರದ್ದು, ಅಣ್ಣನನ್ನೂ ನೋಡಿದ ಖುಷಿ ಸೌಂದರ್ಯಗೆ..ಭೇಟಿ ಕ್ಷಣದಲ್ಲಿ ಅಣ್ಣ ತಂಗಿ ಮತ್ತೆ ಬಾಲ್ಯದ ದಿನಗಳಿಗೆ ಜಾರಿದ್ದಾರೆ.

ಬಾಲ್ಯದ ಆಟ-ತುಂಟಾಟ ನೆನಪುಕೊಂಡು ಒಂದಷ್ಟು ಸಮಯ ಚರ್ಚೆ ನಡೆಸಿದ್ದಾರೆ. ಅಣ್ಣನ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಯಲ್ಲಿಯೂ ಸೌಂದರ್ಯ ಖುಷಿ ಖುಷಿಯಿಂದ ಕಾಲ ಕಳೆದು ಮೂವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮರಿಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ನಡುವೆ ಅಣ್ಣ ತಂಗಿಯ ಬಾಂಧವ್ಯವಿದೆ. ಅದು ಬಿಟ್ರೆ ಅವ್ರು ದೂರವಾಗಿದ್ದರೆ ,ಅವ್ರ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋ ಮಾತುಗಳು ಸತ್ಯಕ್ಕೆ ದೂರವಾದುದ್ದು.

RELATED ARTICLES
- Advertisment -
Google search engine

Most Popular