Friday, April 11, 2025
Google search engine

Homeರಾಜ್ಯಸುದ್ದಿಜಾಲಹಿಂದೂ ದೇವಾಲಯ ಮತ್ತು ಧಾರ್ಮಿಕ ಕೇಂದ್ರಗಳನ್ನು ಸರ್ಕಾರದಿಂದ ಮುಕ್ತಿಗೊಳಿಸಲು ವಿಶ್ವ ಹಿಂದೂ ಪರಿಷತ್ ವತಿಯಿಂದ ಮನವಿ

ಹಿಂದೂ ದೇವಾಲಯ ಮತ್ತು ಧಾರ್ಮಿಕ ಕೇಂದ್ರಗಳನ್ನು ಸರ್ಕಾರದಿಂದ ಮುಕ್ತಿಗೊಳಿಸಲು ವಿಶ್ವ ಹಿಂದೂ ಪರಿಷತ್ ವತಿಯಿಂದ ಮನವಿ

ಮೈಸೂರು: ನಗರದ ಸಿದ್ದಾರ್ಥ ಲೇಔಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಮಹೇಶ್ ಕಾಮತ್ ನೇತೃತ್ವದಲ್ಲಿ ಪ್ರತಿಭಟಿಸಿ ಆನಂತರ ಜಿಲ್ಲಾಡಳಿತ ಕಚೇರಿಯ ತಹಶೀಲ್ದಾರ್ ಶಿವಪ್ರಸಾದ್ ಮೂಲಕ ಹಿಂದೂ ದೇವಾಲಯ ಮತ್ತು ಧಾರ್ಮಿಕ ಕೇಂದ್ರಗಳಿಗೆ ಸರ್ಕಾರದಿಂದ ಮುಕ್ತಿಗೊಳಿಸಲು
ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮೈಸೂರು ಘಟಕದ ಅಧ್ಯಕ್ಷ ಮಹೇಶ್ ಕಾಮತ್ ಲಕ್ಷಾಂತರ ವರ್ಷದಿಂದ ಸನಾತನ ಹಿಂದೂ ಧರ್ಮವಿದ್ದು ಧರ್ಮದ ಕೆಲಸ ನಡೆಯುತ್ತಾ ಬಂದಿರುತ್ತದೆ.

ದೇಶದಲ್ಲಿ ಮುಸಲ್ಮಾನರಿಗೆ ವಕ್ಫ ಬೋರ್ಡ ಹಾಗೂ ಕ್ರೈಸ್ತರಿಗೆ ಅವರದೇ ಬೋರ್ಡ ಇದ್ದು ಬಹುಸಂಖ್ಯಾತರಾದ ಹಿಂದೂಗಳಿಗೆ ಸನಾತನ ಬೋರ್ಡ ಏತಕ್ಕೆ ರಚಿಸಬಾರದು. ಸರ್ಕಾರ ಏತಕ್ಕೆ ಕೇವಲ ದೇವಸ್ಥಾನವನ್ನ ಮುಜರಾಯಿ ಇಲಾಖೆಗೆ ಸೇರಿಸಲ್ಪಟ್ಟಿದೆ. ಭಕ್ತರ ದೇಣಿಗೆಯಿಂದ ದೇವಸ್ಥಾನಗಳು ನಡೆಯುವಂತೆ ಮಾಡಿ ದೇವಸ್ಥಾನದ ಆಡಳಿತ ಮಂಡಳಿಗೆ ಆಡಳಿತ ನಡೆಸಲು ಕೊಡಬೇಕು.

ಇದರಿಂದ ಮುಂದೆಂದೂ ಯಾವುದೇ ಧರ್ಮದವರು ಸರ್ಕಾರ ರಚಿಸಿದರೂ ಹಸ್ತಕ್ಷೇಪ ಮಾಡುವಂತಾಗಬಾರದು. ಉದಾಹರಣೆಗೆ ಇತ್ತೀಚೆಗೆ ತಿರುಪತಿಯಲ್ಲಿ ನಡೆದ ಮಾಂಸದ ಕೊಬ್ಬು ಹಾಗೂ ಮೀನಿನ ಎಣ್ಣೆ ಲಾಡುವಿಗೆ ಬೆರೆಸಿದ ಘಟಣೆಗೆ ಹಿಂದಿನ ಜಗನ್ ರೆಡ್ಡಿ ಸರ್ಕಾರ ಮುಸ್ಲೀಮರಿಗೆ ಹಾಗೂ ಕ್ರಿಶ್ಚನ್ನರಿಗೆ ಟಿಟಿಡಿಯ ಆಡಳಿತಕ್ಕೆ ನೇಮಿಸಿದ ಕಾರಣ ಹಲವು ಮುಸ್ಲೀಂ ಜನರಿಂದ ತುಪ್ಪ ಖರೀದಿಸಿದ ಪರಿಣಾಮ ಇಂತಹ ಘಟಣೆ ನಡೆದಿದೆ. ಆದ್ದರಿಂದ ಎಲ್ಲಾ ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳು ಸರ್ಕಾರದಿಂದ ಮುಕ್ತಿ ಹೊಂದಬೇಕೆಂದು ಆಗ್ರಹಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಮಹೇಶ್ ಕಾಮತ್, ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್, ಅಂಬಿಕಾ ಜೀವನ್, ಸಹ ಕಾರ್ಯದರ್ಶಿ ಪುನೀತ್ ಜಿ ಕೂಡ್ಲೂರು, ಜಯಶ್ರೀ ಶಿವರಾಂ, ಗೋರಕ್ಷಾ ಪ್ರಮುಖ್ ಶಿವರಾಜ್, ಸೇವಾ ಪ್ರಮುಖ್ ಲೋಕೇಶ್ , ಸವಿತಾ ಘಾಟ್ಕೆ ಸೇರಿದಂತೆ ಹಲವಾರು ಹಿಂದೂ ಕಾರ್ಯಕರ್ತರು ಹಾಜರಿದ್ದರು.

RELATED ARTICLES
- Advertisment -
Google search engine

Most Popular