Friday, April 11, 2025
Google search engine

Homeರಾಜ್ಯಹೊಸ ವರ್ಷಾಚರಣೆಗೆ ತಡರಾತ್ರಿವರೆಗೆ ಪಬ್,ಬಾರ್, ಹೊಟೇಲ್ ತೆರೆಯಲು ಅವಕಾಶ ನೀಡುವಂತೆ ಮನವಿ

ಹೊಸ ವರ್ಷಾಚರಣೆಗೆ ತಡರಾತ್ರಿವರೆಗೆ ಪಬ್,ಬಾರ್, ಹೊಟೇಲ್ ತೆರೆಯಲು ಅವಕಾಶ ನೀಡುವಂತೆ ಮನವಿ

ಬೆಂಗಳೂರು: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದ್ದು, ಪಬ್, ಬಾರ್, ರೆಸ್ಟೋರೆಂಟ್ಗಳನ್ನು ತಡರಾತ್ರಿ 2 ಗಂಟೆವರೆಗೆ ತೆರೆಯುವಂತೆ ಮಾಲೀಕರು ಮನವಿ ಮಾಡಿದ್ದಾರೆ.

ವರ್ಷಾಚರಣೆ ಹಿನ್ನಲೆ ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಭರದ ಸಿದ್ದತೆ ನಡೆಯುತ್ತಿದ್ದು, ಪಬ್, ಬಾರ್ಗಳನ್ನು ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದು, ಆ.31ರ ರಾತ್ರಿ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ.

ಅಂದಾಜು 1500 ಕೋಟಿಗೂ ಅಧಿಕ ವ್ಯಾಪಾರವಾಗುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ. ಪ್ರಸ್ತುತ 12 ಗಂಟೆವರೆಗೆ ಮಾತ್ರ ಪಬ್ಬು ಬಾರ್ಗಳನ್ನು ತೆರೆಯಲು ಅವಕಾಶ ನೀಡಿದ್ದು, ಹೊಸ ವರ್ಷಾಚರಣೆಯ ಹಿಂದಿನ ದಿನ 31ರ ರಾತ್ರಿ 2 ಗಂಟೆಯವರೆಗೂ ತೆರೆಯಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದು, ಒಂದು ವೇಳೆ ಸಮಯ ನೀಡದಿದ್ದರೆ ವ್ಯಾಪಾರಕ್ಕೆ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಕಾಲಾವಕಾಶವನ್ನು ನೀಡಬೇಕೆಂದು ಈ ಮೂಲಕ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular