Tuesday, April 22, 2025
Google search engine

Homeಅಪರಾಧಸಿಗರೇಟ್ ಸೇದಬೇಡ ಎಂದಿದ್ದಕ್ಕೆ ಕಂದಾಯ ಅಧಿಕಾರಿ ಮೇಲೆ ಹಲ್ಲೆ

ಸಿಗರೇಟ್ ಸೇದಬೇಡ ಎಂದಿದ್ದಕ್ಕೆ ಕಂದಾಯ ಅಧಿಕಾರಿ ಮೇಲೆ ಹಲ್ಲೆ

ಮೈಸೂರು: ಪಾಲಿಕೆ ಕಚೇರಿ ಬಾಗಿಲ ಬಳಿ ನಿಂತು ಸಿಗರೇಟ್ ಸೇದಬೇಡ ಎಂದು ಹೇಳಿದ್ದಕ್ಕೆ ಕಂದಾಯ ಅಧಿಕಾರಿ ಮತ್ತು ಪಾಲಿಕೆ ಸಿಬ್ಬಂದಿ ಮೇಲೆ ಯುವಕನೋರ್ವ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಮೈಸೂರು ನಗರ ಪಾಲಿಕೆ ವಲಯ ಕಚೇರಿ ೫ರಲ್ಲಿ ನಡೆದಿದೆ. ಸಂಜೆ ೪.೩೦ರ ಸುಮಾರಿಗೆ ಧನುಷ್ ಎಂಬಾತ ಸಿಗರೇಟ್ ಸೇದುತ್ತಾ ನಿಂತಿದ್ದ. ಸರಕಾರಿ ಕಚೇರಿ ಹತ್ತಿರ ಸಿಗರೇಟ್ ಸೇದಬಾರದೆಂದು ಕಂದಾಯ ಅಧಿಕಾರಿ ನಂದಕುಮಾರ್ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಧನುಷ್, ನಂದಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ಕಚೇರಿ ಒಳಗೆ ನುಗ್ಗಿ ಸಹೋದ್ಯೋಗಿಗಳ ಮುಂದೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾನೆ. ಧನುಷ್ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಲಿಕೆ ಸಿಬ್ಬಂದಿಯಿಂದ ಪ್ರತಿಭಟನೆ: ಕರ್ತವ್ಯನಿರತ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ಖಂಡಿಸಿ ನಗರಪಾಲಿಕೆ ಸಿಬ್ಬಂದಿ ಗುರುವಾರ ಕೆಲಹೊತ್ತು ಕೆಲಸ ಸ್ಥಗಿತಗೊಳಿಸಿ ಪಾಲಿಕೆ ಕಚೇರಿ ಬಳಿ ಪ್ರತಿಭಟನೆ ಮಾಡಿದರು. ಆರೋಪಿಯನ್ನು ಬಂಧಿಸಬೇಕು ಹಾಗೂ ಆತನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular