Friday, April 11, 2025
Google search engine

Homeವಿದೇಶಅಮೆರಿಕದ ಟೆಕ್ಸಾಸ್‌ ನಲ್ಲಿ ವಾಹನಗಳ ನಡುವೆ ಸರಣಿ ಅಪಘಾತ: ನಾಲ್ವರು ಭಾರತೀಯರು ಸಜೀವ ದಹನ

ಅಮೆರಿಕದ ಟೆಕ್ಸಾಸ್‌ ನಲ್ಲಿ ವಾಹನಗಳ ನಡುವೆ ಸರಣಿ ಅಪಘಾತ: ನಾಲ್ವರು ಭಾರತೀಯರು ಸಜೀವ ದಹನ

ಹ್ಯೂಸ್ಟನ್‌ : ಅಮೆರಿಕದ ಟೆಕ್ಸಾಸ್‌ ರಾಜ್ಯದಲ್ಲಿ ಸಂಭವಿಸಿದ ಐದು ವಾಹನಗಳ ನಡುವಿನ ಸರಣಿ ಅಪಘಾತದಲ್ಲಿ ನಾಲ್ವರು ಭಾರತೀಯರು ಸಜೀವ ದಹನಗೊಂಡಿದ್ದಾರೆ.

ಹ್ಯೂಸ್ಟನ್‌ನಲ್ಲಿರುವ ಭಾರತೀಯ ಕಾನ್ಸುಲ್ ಜನರಲ್ ಡಿ. ಸಿ. ಮಂಜುನಾಥ್ ಅವರು ಮೃತರ ಗುರುತನ್ನು ದೃಢಪಡಿಸಿದ್ದಾರೆ. ಕಚೇರಿಯು ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲಾ ನೆರವನ್ನು ನೀಡುವುದಾಗಿ ಹೇಳಿದ್ದಾರೆ.

ಕಳೆದ ಶುಕ್ರವಾರ ಮಧ್ಯಾಹ್ನದ ವೇಳೆಗೆ ಅಪಘಾತ ಸಂಭವಿಸಿದೆ. ಟ್ರಾಫಿಕ್‌ನಲ್ಲಿ ವಾಹನಗಳು ನಿಂತಿದ್ದ ವೇಳೆ ಹಿಂದಿನಿಂದ ಅತಿವೇಗದಲ್ಲಿ ಬಂದ ಟ್ರಕ್ ಕಾರಿಗೆ ಗುದ್ದಿದೆ. ಇದರಿಂದಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ  ಎಂದು ಪ್ರಾಥಮಿಕ ವರದಿ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಮೃತರನ್ನು ಹೈದರಾಬಾದ್‌ನ ಆರ್ಯನ್‌ ರಂಗನಾಥನ್‌ ಒರಂಪಟ್ಟಿ, ಆತನ ಸ್ನೇಹಿತ ಫಾರೂಕ್‌ ಶೇಖ್‌, ವಿದ್ಯಾರ್ಥಿ ಲೋಕೇಶ್‌ ಮತ್ತು ತಮಿಳುನಾಡಿನ ದರ್ಶಿನಿ ವಾಸುದೇವ್‌ ಎಂದು ಗುರುತಿಸಲಾಗಿದೆ. ಮೃತದೇಹಗಳು ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿದ್ದರಿಂದ ಅಧಿಕೃತವಾಗಿ ಗುರುತಿಸಲು ಸಮಯ ಹಿಡಿಯಿತು. ಘಟನೆಯಲ್ಲಿ ಹಲವು ಗಾಯಗೊಂಡಿದ್ದಾರೆ ಎಂದು ಮಂಜುನಾಥ್‌ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular