Friday, April 11, 2025
Google search engine

Homeದೇಶಮದುವೆ ನಿಶ್ಚಯಕ್ಕೆಂದು ಊರಿಗೆ ಬರುತ್ತಿದ್ದ ಬೆಳಗಾವಿ ಯೋಧ ರೈಲಿನಿಂದ ಜಾರಿ ಬಿದ್ದು ಸಾವು

ಮದುವೆ ನಿಶ್ಚಯಕ್ಕೆಂದು ಊರಿಗೆ ಬರುತ್ತಿದ್ದ ಬೆಳಗಾವಿ ಯೋಧ ರೈಲಿನಿಂದ ಜಾರಿ ಬಿದ್ದು ಸಾವು

ಬೆಳಗಾವಿ: ಮದುವೆ ದಿನಾಂಕ ನಿಶ್ಚಯ ಮಾಡಲು ಸ್ವಗ್ರಾಮಕ್ಕೆ ಆಗಮಿಸುತ್ತಿದ್ದ ಯೋಧ ಆಕಸ್ಮಿಕವಾಗಿ ರೈಲಿನಿಂದ ಕಾಲು ಜಾರಿ ಕೆಳಗೆ ಬಿದ್ದು, ಮೃತಪಟ್ಟಿರುವ ಕರುಣಾಜನಕ ಘಟನೆ ಪಂಜಾಬ್ ​ನ ಲೂಧಿಯಾನ ರೈಲು ನಿಲ್ದಾಣದ ಸಮೀಪದಲ್ಲಿ ಗುರುವಾರ ನಡೆದಿದೆ.

ಕಾಶಿನಾಥ್ ಶಿಂದಿಗಾರ (28) ಮೃತ ಯೋಧ.

ಈತ ಗೋಕಾಕ ತಾಲೂಕಿನ ಕನಸಗೇರಿ ಗ್ರಾಮದ ನಿವಾಸಿ. 8 ವರ್ಷಗಳ ಹಿಂದೆ ಸೇನೆಗೆ ಸೇರಿದ್ದ. ಇತ್ತೀಚೆಗಷ್ಟೇ ಕಾಶಿನಾಥ್​ಗೆ ನಿಶ್ಚಿತಾರ್ಥ ಆಗಿತ್ತು. ಮದುವೆಯ ದಿನಾಂಕ ನಿಗದಿ ಮಾಡಲು ಪಾಲಕರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಶಿನಾಥ್​, ಪಂಜಾಬ್​ನಿಂದ ರೈಲು ಮೂಲಕ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದ. ಆದರೆ, ಮಾರ್ಗಮಧ್ಯೆ ಕಾಲು ಜಾರಿ ರೈಲಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮದಲ್ಲಿ ದುಃಖದ ಕಾರ್ಮೋಡ ಆವರಿಸಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲೇ ಅಂತ್ಯಕ್ರಿಯೆ ಸಿದ್ಧತೆ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular