Thursday, April 3, 2025
Google search engine

Homeಅಪರಾಧತಾಯಿ ಸಾವಿನಿಂದ ಮನನೊಂದು ನೇಣಿಗೆ ಶರಣಾದ ಮಗ

ತಾಯಿ ಸಾವಿನಿಂದ ಮನನೊಂದು ನೇಣಿಗೆ ಶರಣಾದ ಮಗ

ಚಿಕ್ಕಬಳ್ಳಾಪುರ: ತಾಯಿ ಸಾವಿನಿಂದ ಮನನೊಂದು ಮಗ ಸಹ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ನಂದಿ ಮೋರಿ ಬಳಿ ನಡೆದಿದೆ.

ನೇಣಿಗೆ ಶರಣಾದ ಯುವಕನನ್ನು ಕೊನಘಟ್ಟ ಗ್ರಾಮದ ರಕ್ಷಿತ್ ಬಾಬು (24) ಎಂದು ಗುರುತಿಸಲಾಗಿದೆ. ಯುವಕ, ಫುಡ್ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇವರ ತಾಯಿ ಚಂದ್ರಿಕಾ ಸಹ ಕಳೆದ ಒಂದೂವರೆ ತಿಂಗಳ ಹಿಂದೆ ಸಾಲಬಾಧೆಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.

ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular