Friday, April 18, 2025
Google search engine

Homeರಾಜ್ಯಸುದ್ದಿಜಾಲರಾತ್ರಿ ವೇಳೆ ಗೋವುಗಳಿಂದ ಅಪಘಾತ ತಡೆಗಟ್ಟಲು ಜನಧ್ವನಿ ಫೌಂಡೇಶನ್ ವತಿಯಿಂದ ವಿಶೇಷ ಕಾರ್ಯಕ್ರಮ

ರಾತ್ರಿ ವೇಳೆ ಗೋವುಗಳಿಂದ ಅಪಘಾತ ತಡೆಗಟ್ಟಲು ಜನಧ್ವನಿ ಫೌಂಡೇಶನ್ ವತಿಯಿಂದ ವಿಶೇಷ ಕಾರ್ಯಕ್ರಮ

ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರಾತ್ರಿವೇಳೆ ಗೋವುಗಳು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದು ಗೋವುಗಳು ವಾಹನ ಸವಾರರಿಗೆ ಕಾಣದೆ ಇರುವುದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹುಣಸೂರಿನಲ್ಲಿ ಜನಧ್ವನಿ ಫೌಂಡೇಶನ್ ವತಿಯಿಂದ ಗೋವುಗಳಿಗೆ ರೇಡಿಯಂ ಬೆಲ್ಟ್ ಗಳನ್ನು ಅಳವಡಿಕೆ ಮಾಡಲಾಯಿತು .

ಈ ಸಂದರ್ಭದಲ್ಲಿ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ವಕೀಲ ಆಯರಹಳ್ಳಿ ಪ್ರವೀಣ್ ವಾಹನ ಸವಾರರು ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಅತಿವೇಗವಾಗಿ ಹೋಗುವಾಗ ಗೋವುಗಳು ರಸ್ತೆಯಲ್ಲಿ ಮಲಗಿರುವುದು ಅಥವಾ ಓಡಾಡುವುದು ಕಾಣುವುದಿಲ್ಲ ಆದ್ದರಿಂದ ಅಪಘಾತಗಳು ಸಂಭವಿಸುತ್ತಿವೆ ಆದ್ದರಿಂದ ನಮ್ಮ ಫೌಂಡೇಶನ್ ವತಿಯಿಂದ ಈ ರೀತಿ ಕಾರ್ಯ ಮಾಡುತ್ತಿದ್ದೇವೆ ಎಂದರು ಹಾಗೂ ನಿಮ್ಮ ಊರು ಅಥವಾ ಬಡವಾಣೆಗಳಲ್ಲಿ ಈ ರೀತಿಯ ಗೋವುಗಳು ಕಂಡು ಬಂದಲ್ಲಿ ನಮ್ಮ ಸಹಾಯವಾಣಿ 9964885050 ಗೆ ಕರೆ ಮಾಡಿ ಎಂದರು. ಈ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷ ವಕೀಲರಾದ ಆಯರಹಳ್ಳಿ ಪ್ರವೀಣ್ , ಗೌರವಾಧ್ಯಕ್ಷರಾದ ಸುನೀಲ್ , ಖಜಾಂಚಿ ಅಭಿ ನಾಗಮಂಗಲ,ನಿರ್ದೇಶಕರಾದ ಹೊಸರಾಮನಹಳ್ಳಿ ರಾಜು,ಸುನೀಲ್ ಹೆಚ್ ವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular