ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜನಧ್ವನಿ ಫೌಂಡೇಶನ್ ವತಿಯಿಂದ ಹುಣಸೂರು ತಾಲ್ಲೂಕಿನ ತೆಂಕಲಕೊಪ್ಪಲು ಪ್ರೌಢಶಾಲೆಯಲ್ಲಿ ವೃಕ್ಷಾ-ರಕ್ಷಾ ಎಂಬ ಶೀರ್ಷಿಕೆಯಡಿ ವಿಶೇಷ ರೀತಿಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪದ್ಮಶ್ರೀ ಪುರಸ್ಕೃತ ಸೋಮಣ್ಣ ಅವರು ಪಾಲ್ಗೊಂಡು ಮಾತನಾಡಿ, ಶಾಲಾ ಮಕ್ಕಳಿಗೆ ಸಸಿಗಳನ್ನು ದತ್ತು ನೀಡುವ ಮೂಲಕ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ವಿದ್ಯಾರ್ಥಿಗಳಿಗೆ ಬಹುಮಾನ ಘೋಷಿಸಿ, ಪರಿಸರ ಸಂರಕ್ಷಣೆ ಮಾಡಲು ಪ್ರೇರೇಪಿಸುತ್ತಿರುವ ಜನಧ್ವನಿ ಫೌಂಡೇಶನ್ ನಡೆ ಶ್ಲಾಘನೀಯ ಎಂದರು.

ಶಾಲಾ ಶಿಕ್ಷಕರಾದ ಸುನಿಲ್ ಮಾತ ನಾಡಿದರು. ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಮಕ್ಕಳು, ಫೌಂಡೇಶನ್ ಅಧ್ಯಕ್ಷರಾದ ವಕೀಲ ಆಯರಹಳ್ಳಿ ಪ್ರವೀಣ್, ಗೌರವಾಧ್ಯಕ್ಷ ಸುನಿಲ್, ಖಜಾಂಚಿ ಅಭಿ ನಾಗಮಂಗಲ, ಸ್ವಾಮಿಗೌಡ, ಮೈನ್ಸ್ ಮಾಲೀಕರಾದ ಚಂದ್ರಶೇಖರ್, ಯುವ ನಿರ್ದೇಶಕ ದೇವರಹಳ್ಳಿ ತ್ಯಾಗರಾಜ್, ನಿರ್ದೇಶಕರು ಗಳಾದ ರಾಜು, ಸುನಿಲ್, ಯಶ್ವಂತ್, ಕಿರಣ್, ಮತ್ತಿತರರು ಉಪಸ್ಥಿತರಿದ್ದರು.