Monday, April 21, 2025
Google search engine

HomeUncategorizedರಾಷ್ಟ್ರೀಯರಾಮ ಮಂದಿರಕ್ಕೆ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾನ ಪ್ರತಿಮೆ ಆಯ್ಕೆ

ರಾಮ ಮಂದಿರಕ್ಕೆ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾನ ಪ್ರತಿಮೆ ಆಯ್ಕೆ

ಹೊಸದಿಲ್ಲಿ: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಗೊಳ್ಳಲು ಮೈಸೂರು ಮೂಲದ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ ರಾಮಲಲ್ಲಾನ ಹೊಸ ಪ್ರತಿಮೆ ಆಯ್ಕೆಯಾಗಿದೆ

ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಸ್ಪಷ್ಟಪಡಿಸಿದ್ದಾರೆ.

ರಾಮ ಲಲ್ಲಾ ಪ್ರಸ್ತುತ ಪ್ರತಿಮೆಯನ್ನು ಹೊಸ ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗುವುದು ಎಂದಿದ್ದಾರೆ.

ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಸೇರಿ ಮೂವರು ಶಿಲ್ಪಿಗಳು ರಾಮನ ಪ್ರತಿಮೆ ಕೆತ್ತಿದ್ದಾರೆ. ಇವರಲ್ಲದೆ, ಬೆಂಗಳೂರಿನ ಗಣೇಶ್ ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಇತರ ಇಬ್ಬರು ಶಿಲ್ಪಿಗಳು.

ಆರು ತಿಂಗಳ ಕಾಲ ಅರುಣ್ ಯೋಗಿರಾಜ್ ಅವರು ಮೂರ್ತಿಯ ಬಗ್ಗೆ ಕೂಲಂಕುಷವಾಗಿ ಕೆಲಸ ಮಾಡಿದ್ದಾರೆ. ಪೀಠವನ್ನು ಒಳಗೊಂಡಿರುವ ಎಂಟು ಅಡಿ ಎತ್ತರದ ವಿಗ್ರಹವು ಮೂರೂವರೆ ಅಡಿ ಅಗಲವನ್ನು ವ್ಯಾಪಿಸಿದೆ, ಸುತ್ತಲೂ ವಿಸ್ತಾರವಾದ ಪ್ರಭಾವಳಿಯನ್ನು ಒಳಗೊಂಡಿದೆ. ಪ್ರತಿಮೆಯ ಬಾಲ್ಯದಲ್ಲಿ ಭಗವಾನ್ ರಾಮನನ್ನು ಚಿತ್ರಿಸುತ್ತದೆ.

ಜನವರಿ 22 ರಂದು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ನೂರಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

RELATED ARTICLES
- Advertisment -
Google search engine

Most Popular