Friday, April 18, 2025
Google search engine

Homeರಾಜ್ಯಸುದ್ದಿಜಾಲವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಕಲಿತಾಗ ಮಾತ್ರ ಉತ್ತಮ ಫಲಿತಾಂಶ

ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಕಲಿತಾಗ ಮಾತ್ರ ಉತ್ತಮ ಫಲಿತಾಂಶ

ಪಿರಿಯಾಪಟ್ಟಣ: ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿಯಿಟ್ಟುಕೊಂಡು ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಹುಣಸೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಪುಟ್ಟಶೆಟ್ಟಿ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ವೇದಿಕೆ ಕ್ರೀಡೆ ರಾಷ್ಟ್ರೀಯ ಸೇವಾ ಯೋಜನೆ ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ರೆಡ್ ಕ್ರಾಸ್ ವಿಭಾಗದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ನಮ್ಮಲ್ಲಿನ ಜ್ಞಾನಾರ್ಜನೆಗೆ ತಕ್ಕಂತೆ ಉದ್ಯೋಗಾವಕಾಶಗಳು ಲಭಿಸುವುದರಿಂದ ಅಧ್ಯಯನ ವಿಷಯದಲ್ಲಿ ನಿರುತ್ಸಾಹ ತೋರದೆ ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಕಲಿತಾಗ ಮಾತ್ರ ಉತ್ತಮ ಫಲಿತಾಂಶ ಪಡೆದು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಬಹುದು ಎಂದರು.

ಪ್ರಾಂಶುಪಾಲೆ ಡಿ.ಅಂಬಿಕಾ ಅವರು ಮಾತನಾಡಿ ನಮ್ಮ ಭವಿಷ್ಯ ರೂಪಿಸುವಲ್ಲಿ ವಿದ್ಯಾರ್ಥಿ ಜೀವನ ಮಹತ್ತರ ಪಾತ್ರ ವಹಿಸಲಿದ್ದು ಉತ್ತಮ ಕಲಿಕೆ ಮೂಲಕ ಪೋಷಕರು ತಮ್ಮ ಮೇಲೆ ಇಟ್ಟ ನಂಬಿಕೆ ಉಳಿಸಿಕೊಂಡು ಉನ್ನತ ಫಲಿತಾಂಶ ಪಡೆಯುವ ಮೂಲಕ ತಾವು ಓದಿದ ಕಾಲೇಜಿಗೆ ಶೈಕ್ಷಣಿಕವಾಗಿ ಒಳ್ಳೆಯ ಹೆಸರು ತರುವಂತೆ ತಿಳಿಸಿದರು.

ನಿವೃತ್ತ ಉಪನ್ಯಾಸಕ ಟಿ.ರಾಜು ಅವರು ಮಾತನಾಡಿ ಕಾಲೇಜಿಗೆ ಕೀರ್ತಿ ಹಾಗೂ ಹೆಸರು ಬರಲು ವಿದ್ಯಾರ್ಥಿಗಳ ಪರಿಶ್ರಮದ ಕಲಿಕೆಯ ಉತ್ತಮ ಫಲಿತಾಂಶ ಕಾರಣವಾಗಿದ್ದು ಗುರುಗಳ ಮಾರ್ಗದರ್ಶನದಲ್ಲಿ ಚನ್ನಾಗಿ ಕಲಿತು ಕಾಲೇಜು ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.

ಈ ವೇಳೆ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ರೆಡ್ ಕ್ರಾಸ್ ಚಟುವಟಿಕೆಯ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು, ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು.

ಈ ಸಂದರ್ಭ ಐಕ್ಯೂಎಸಿ ಸಂಚಾಲಕರಾದ ಸಿ.ಆರ್ ವಿಶ್ವನಾಥ್, ಸಾಂಸ್ಕೃತಿಕ ವಿಭಾಗ ಸಂಚಾಲಕ ಎನ್.ಪ್ರಸಾದ್, ದೈಹಿಕ ಶಿಕ್ಷಣ ನಿರ್ದೇಶಕ ಎನ್ಎಸ್ಎಸ್ ಸಂಯೋಜನಾದಿಕಾರಿ ರಾಜಗೋಪಾಲ್, ಐಟಿ ಸಂಚಾಲಕ ಸಾಗರ್, ಇಎಲ್ಸಿ ಸಂಚಾಲಕ ಡಾ.ಗುರುಬಸವರಾಜಸ್ವಾಮಿ ಪಂಡಿತ, ರೆಡ್ ಕ್ರಾಸ್ ಸಂಚಾಲಕಿ ಡಾ.ಶೈಲಶ್ರೀ, ಗ್ರಂಥಪಾಲಕ ಹೆಚ್.ರಮೇಶ್, ಅಧೀಕ್ಷಕರಾದ ಬಿ.ಜಿ ಕವಿತಾ, ಅರುಣ್ ಕುಮಾರ್, ಉಪನ್ಯಾಸಕರಾದ ಡಾ.ಪರಮೇಶ್, ನಂಜುಂಡಸ್ವಾಮಿ, ಮಂಜುನಾಥ್, ನವೀನ್, ಚಂದು, ಅವಿನಾಶ್, ಡಾ.ಎಸ್.ಕೆ ಮಂಜುನಾಥ್, ಸದಾಫ್, ನಾಗೇಶ್, ಯಶಸ್ವಿನಿ, ಚಿತ್ರ, ಶಿಲ್ಪ, ಅಲಿ, ಗೀತಾ, ಪ್ರೇಮಾರ್ಜುನ್, ಮಮತಾ, ಜಿ.ಮಂಜು ಮತ್ತು ವಿದ್ಯಾರ್ಥಿಗಳು ಇದ್ದರು.

RELATED ARTICLES
- Advertisment -
Google search engine

Most Popular