Sunday, April 20, 2025
Google search engine

Homeರಾಜ್ಯಮೊಬೈಲ್ ಹೆಚ್ಚು ಬಳಸದಂತೆ ಬುದ್ದಿವಾದ ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

ಮೊಬೈಲ್ ಹೆಚ್ಚು ಬಳಸದಂತೆ ಬುದ್ದಿವಾದ ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

ಗೌರಿಬಿದನೂರು: ಮೊಬೈಲ್​ ನಲ್ಲೇ ಹೆಚ್ಚು ಸಮಯ ಕಳೆಯಬೇಡ. ಅದರ ಬದಲು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವ ಎಂದು ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಒಂಬತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಸಮೀಪದ ಚಿತ್ತವಾಳಹಳ್ಳಿ ಗ್ರಾಮದಲ್ಲಿ ನಡೆದಿದೆ.

ಲೋಕೇಶ್ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಭಾನುವಾರದಂದು ತನ್ನ ಪೋಷಕರೊಂದಿಗೆ ಜಗಳವಾಡಿ, ಮನೆಯಿಂದ ಹೊರಬಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತನಾಗಿರುವ ಲೋಕೇಶ್ ತಂದೆ, ತನ್ನ ಮಗ ಮೊಬೈಲ್​ ನಲ್ಲಿ ಕಾಲ ಕಳೆಯುವ ಬದಲು ಶಿಕ್ಷಣದ ಮೇಲೆ ಗಮನ ಹರಿಸಬೇಕೆಂದು ಬಯಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular