Tuesday, April 22, 2025
Google search engine

Homeಅಪರಾಧಜಂಕ್​ ಫುಡ್​ ತಿನ್ನಬೇಡ ಎಂದು ಗದರಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಜಂಕ್​ ಫುಡ್​ ತಿನ್ನಬೇಡ ಎಂದು ಗದರಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಮಹಾರಾಷ್ಟ್ರ: ಜಂಕ್​ ಫುಡ್​ ತಿನ್ನಬೇಡ ಎಂದು ತಂದೆ ಗದರಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಮೃತ ಭೂಮಿಕಾ ವಿನೋದ್ ಧನ್ವಾನಿ ನಗರದ ಸಿಂಧಿ ಕಾಲೋನಿ ಪ್ರದೇಶದಲ್ಲಿ ವಾಸವಾಗಿದ್ದು, ಆಕೆ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು.

ಭೂಮಿಕಾ ಬಿಬಿಎ ವಿದ್ಯಾರ್ಥಿನಿಯಾಗಿದ್ದು, ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರು. ಜಂಕ್ ಫುಡ್ ತಿಂದಿದ್ದಕ್ಕೆ ತಂದೆ ಬೈದಿದ್ದಕ್ಕೆ ಮನನೊಂದ ಆಕೆ ಉದ್ದನೆಯ ಬಟ್ಟೆಯಿಂದ ಅಡುಗೆ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಕೆಯ ಪೋಷಕರು ಬೆಳಗ್ಗೆ ಆಕೆಯನ್ನು ನೇಣುಬಿಗಿದ ಸ್ಥಿತಿಯಲ್ಲಿ ಕಂಡ ತಕ್ಷಣವೇ, ನಂತರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಆಕೆ ಬದುಕುಳಿಯಲಿಲ್ಲ.

RELATED ARTICLES
- Advertisment -
Google search engine

Most Popular