ನಾಗಮಂಗಲ : ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಚಾಲನೆ ಮಾಡುತ್ತಿದ್ದ ಶಿಕ್ಷಕರೊಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ಚಾಮರಾಜನಗರ- ಬೀದರ್ ಹೈವೇ ರಸ್ತೆ ತಾಲೂಕಿನ ಜೋಡಿ ನೇರಳೆಕೆರೆ ಗೇಟ್ ಬಳಿ ನಡೆದಿದೆ. ಬಿಂಡಿಗಿನವಿಲೆ ಹೋಬಳಿ ಎಚ್. ಭೂವನಹಳ್ಳಿ ಗ್ರಾಮದ ಹಾಗೂ ತಾಲೂಕಿನ ಇಜ್ಜಲಘಟ್ಟ ಗ್ರಾಮದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಬಿ.ಎನ್. ರಾಮಕೃಷ್ಣೇಗೌಡ(೫೯) ಮೃತಪಟ್ಟರು.
ನಿನ್ನೆ ಸಂಜೆ ಶಾಲೆ ಮುಗಿಸಿ ಊರಿಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ತಾಲೂಕಿನ ಜೋಡಿ ನೇರಳೆಕೆರೆ ಗೇಟ್ ಬಳಿ ನಾಗಮಂಗಲದಿಂದ ಮೈಸೂರಿನ ಕಡೆ ಬರುತ್ತಿದ್ದ ಕಾರು ಹಾಗೂ ಶಾಲೆ ಮುಗಿಸಿ ನಾಗಮಂಗಲ ಕಡೆ ತೆರಳುತ್ತಿದ್ದ ಶಿಕ್ಷಕರ ಹೀರೋ ಹೋಂಡಾ ಬೈಕ್‌ಗೆ ಡಿಕ್ಕಿ ಸಂಭವಿಸಿ ಬಿ.ಎನ್. ರಾಮಕೃಷ್ಣೇಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.