Friday, April 18, 2025
Google search engine

Homeರಾಜ್ಯತುಮಕೂರು ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಲಿರುವ ಕೇಂದ್ರದ ತಂಡ

ತುಮಕೂರು ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಲಿರುವ ಕೇಂದ್ರದ ತಂಡ

ತುಮಕೂರು: ಕೇಂದ್ರದಿಂದ ಮೂರು ತಂಡ ರಾಜ್ಯಕ್ಕೆ ಆಗಮಿಸಿದ್ದು, ಮೂರನೇ ತಂಡ ತುಮಕೂರು ಜಿಲ್ಲೆಯಲ್ಲಿ ಇಂದು ಪ್ರವಾಸ ಕೈಗೊಳ್ಳಲಿದೆ.

ಬರದಿಂದ ಜಿಲ್ಲೆಯಲ್ಲಿ 148 ಕೋಟಿ ನಷ್ಟವಾಗಿರುವ ಹಿನ್ನಲೆಯಲ್ಲಿ ಅಶೋಕ್ ಕುಮಾರ್, ಕಿರಣ್ ಚೌದ್ರಿ, ಕಿರಣ್ ಕುಮಾರ್ ನೇತೃತ್ವದ ತಂಡ ಬರ ವೀಕ್ಷಣೆ ನಡೆಸಲಿದೆ.

ಶಿರಾ, ಮಧುಗಿರಿ, ಕೊರಟಗೆರೆ ತಾಲೂಕಿನಲ್ಲಿ ಬರ ಅಧ್ಯಯನ ಮಾಡುವ ತಂಡ, ಬೈರನಹಳ್ಳಿಯ ಪೂಜಾರಳ್ಳಿ, ಕೈಮರದ ಡಿವಿ ಹಳ್ಳಿ, ಭುವನಹಳ್ಳಿ, ಕಲ್ಲುಕೋಟೆಗೂ ಭೇಟಿ ನೀಡಲಿದೆ.

ಸಂಜೆ ಮಧುಗಿರಿಯಲ್ಲಿ ಡಿಜಿಟಲ್ ಪ್ರಾತ್ಯಕ್ಷಿಕೆ ಮೂಲಕ ಕೃಷಿ ಇಲಾಖೆ ಹೆಚ್ವಿನ ಮಾಹಿತಿ ನೀಡಲಿದೆ.

ಸಂಜೆ ಮಧುಗಿರಿಯಿಂದ ಸಿರಾ ಹಾಗೂ ಚಿತ್ರದುರ್ಗ ಜಿಲ್ಲೆಗೆ ಬರ ಅಧ್ಯಯನ ತಂಡ ತೆರಳಲಿದೆ.

RELATED ARTICLES
- Advertisment -
Google search engine

Most Popular