Wednesday, April 16, 2025
Google search engine

HomeUncategorizedರಾಷ್ಟ್ರೀಯಬಸ್‌–ಕ್ರೂಸರ್‌ ನಡುವೆ ಭೀಕರ ಅಪಘಾತ: 8 ಜನರ ಸಾವು

ಬಸ್‌–ಕ್ರೂಸರ್‌ ನಡುವೆ ಭೀಕರ ಅಪಘಾತ: 8 ಜನರ ಸಾವು

ಚಂಡೀಗಢ: ಬಸ್‌–ಕ್ರೂಸರ್‌ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 8 ಮಂದಿ ಮೃತಪಟ್ಟು, 12 ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಜಿಂದ್‌ ನ ಭಿವಾನಿ ರಸ್ತೆಯಲ್ಲಿರುವ ಬಿಬಿಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಇಂದು ಬೆಳಿಗ್ಗೆ ಜಿಂದ್ ಬಸ್ ನಿಲ್ದಾಣದಿಂದ 9:30ರ ಸುಮಾರಿಗೆ ಹೊರಟ ಬಸ್​ ಬೀಬಿಪುರ ಗ್ರಾಮದ ಬಳಿ ತಲುಪುತ್ತಿದ್ದಂತೆಯೇ ಎದುರಿನಿಂದ ಬರುತ್ತಿದ್ದ ಕ್ರೂಸರ್ ಜೀಪ್‌ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ನಜ್ಜುಗುಜ್ಜಾಗಿದ್ದು, ಅಪಘಾತದ ಸದ್ದು ಕೇಳಿ ಸುತ್ತಮುತ್ತಲ ಜನರು ಕ್ರೂಸರ್‌ ನಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ಜನರು ಪ್ರಯತ್ನಿಸಿದರು.

ಆದರೆ ಅನೇಕ ಜನರು ವಾಹನದಲ್ಲಿ ಸಿಲುಕಿಕೊಂಡ ಪರಿಣಾಮ, ಸಾಕಷ್ಟು ಪ್ರಯತ್ನದ ನಂತರವೂ ಜನರು ಅಸಹಾಯಕರಾಗಿ ನೋಡುತ್ತಿದ್ದರು. ಈ ಅಪಘಾತದಲ್ಲಿ ಗಾಯಗೊಂಡಿದ್ದ 7 ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ.

ಇನ್ನು ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯನಡೆಸಿ ಗಾಯಾಳುಗಳನ್ನು ತಕ್ಷಣ ಜಿಂದ್ ಜನರಲ್ ಆಸ್ಪತ್ರೆಗೆ ವೈದ್ಯಕೀಯ ಚಿಕಿತ್ಸೆಗಾಗಿ ರವಾನಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ದೇಹಗಳನ್ನು ಸಿವಿಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ಮೃತರ ಗುರುತಿಗಾಗಿ ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular