Thursday, April 3, 2025
Google search engine

Homeಕಾಡು-ಮೇಡುಕಾದಾಟದಲ್ಲಿ ಹುಲಿ ಸಾವು

ಕಾದಾಟದಲ್ಲಿ ಹುಲಿ ಸಾವು

ಹನಗೋಡು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪರಿಸರದ ಆಧಿಪತ್ಯಕ್ಕಾಗಿ ವನ್ಯ ಪ್ರಾಣಿಗಳ ಒಳ ಕಾದಾಟದಿಂದ ಐದು ವರ್ಷದ ಗಂಡು ಹುಲಿಯೊಂದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ಆನೆಚೌಕೂರು ಭಾಗ-೧ ಶಾಖೆಯ ಸಿ.ಪಿ.ಟಿ-೦೧ ಗಸ್ತಿನ ಲಕ್ಷ್ಮೀಪುರ ಕಳ್ಳಬೇಟೆ ತಡೆ ಶಿಬಿರದ ಗೋವಿಂದೇಗೌಡ ಕಂಡಿ ಅರಣ್ಯ ಪ್ರದೇಶದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಗಸ್ತು ಮಾಡುವಾಗ ೫ ವರ್ಷದ ಗಂಡು ಹುಲಿಯ ಕಳೇಬರ ಪತ್ತೆಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಬುಧವಾರ ಸದರಿ ಸ್ಥಳಕ್ಕೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಡಾ. ಕುಮಾರ್ ಚಿಕ್ಕನರಗುಂದ, ಪಶು ವೈದ್ಯಾಧಿಕಾರಿಗಳು ಮತ್ತು ಆನೆ ಪ್ರಭಾರಕರಾದ ಡಾ. ರಮೇಶ್, ಡಾ.ಬಿ.ಸಿ. ಚಿಟ್ಟಿಯಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎಸ್. ದಯಾನಂದ, ವನ್ಯಜೀವಿ ಪರಿಪಾಲಕ ಕೃತಿಕಾ ಮೋಹನ್, ಎನ್.ಟಿ.ಸಿ.ಎ ನಾಮ ನಿರ್ದೇಶನ ಸದಸ್ಯ ಕೆ.ವಿ.ಬೋಸ್ ಮಾದಪ್ಪ, ಸ್ಥಳೀಯ ಸರ್ಕಾರೇತರ ಸಂಸ್ಥೆಯ ಸದಸ್ಯ ತಮ್ಮಯ್ಯ.ಸಿ.ಕೆ., ಸ್ವಾಮಿ.ಸಿ.ಎನ್, ವಲಯ ಅರಣ್ಯಾಧಿಕಾರಿ ಕೆ.ಇ. ಸುಬ್ರಮಣ್ಯ, ಚೌತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುತ್ತುರಾಜ್.ಸಿ.ಎಸ್., ಇವರ ಉಪಸ್ಥಿತಿಯಲ್ಲಿ ಸದರಿ ಸ್ಥಳ ಪರಿಶೀಲನೆ ಮಾಡಿ. ಎನ್.ಟಿ.ಸಿ.ಎ. ಮಾರ್ಗಸೂಚಿಯಂತೆ ಮರಣೋತ್ತರ ಪರೀಕ್ಷೆಯನ್ನು ನಡೆಸಿ ನಿಯಮಾನುಸಾರ ಮೃತಪಟ್ಟಿರುವ ಹುಲಿಯ ದೇಹವನ್ನು ದಹಿಸಲಾಯಿತು.

RELATED ARTICLES
- Advertisment -
Google search engine

Most Popular