ಕನಕಪುರ: ಮನೆ ಮುಂಭಾಗದಲ್ಲಿ ನಿಲುಗಡೆ ಮಾಡಿದ್ದ ಟ್ರಾಕ್ಟರ್ ಕಳ್ಳತನ ಮಾಡಿರುವ ಘಟನೆ ಅಚ್ಚಲು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಮದ ದೇವರಾಜು ಎಂಬುವರಿಗೆ ಸೇರಿದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಟ್ರ್ಯಾಕ್ಟರ್ ಅನ್ನು ಖದೀಮರು ಕಳ್ಳತನ ಮಾಡಿದ್ದು ಶುಕ್ರವಾರ ಮುಂಜಾನೆ ನಾಲ್ಕರ ಸಮಯದಲ್ಲಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ಅಚ್ಚಲು ಗ್ರಾಮದ ಪೈಪ್ಲೈನ್ ರಸ್ತೆಯಲ್ಲಿರುವ ದೇವರಾಜು ಅವರ ಸಹೋದರಿಯ ಮನೆಯ ಕಾಂಪೌಂಡ್ ಒಳಗೆ ಎಂದಿನಂತೆ ಎರಡು ಟ್ರ್ಯಾಕ್ಟರ್ ಅನ್ನು ನಿಲುಗಡೆ ಮಾಡಿದ್ದರು ಆದರೆ ಚಾಲಾಕಿ ಖದೀಮರು ಕೆಎ ೪೨ ಟಿ ೬೨ ೯೪ ಸಂಖ್ಯೆಯ ಒಂದು ಟ್ರ್ಯಾಕ್ಟರ್ ಅನ್ನು ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದಾರೆ ಬೆಳಗ್ಗೆ ಎದ್ದು ನೋಡಿದಾಗ ಟ್ಯಾಕ್ಟರ್ ಕಾಂಪೌಂಡ್ ಒಳಗೆ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ
ತೋಟಹಳ್ಳಿ ಗ್ರಾಮದ ಮನೆಯೊಂದರಲ್ಲಿ ಸಿಸಿ ಟಿವಿ ಅಳವಡಿಸಿದ್ದು ಪೊಲೀಸರು ಸಿಸಿಟಿವಿ ಪರಿಶೀಲಿಸಿ ಯಾರು ಟ್ರ್ಯಾಕ್ಟರ್ ಅನ್ನು ಕಳ್ಳತನ ಮಾಡಿದ್ದಾರೆ ಅವರನ್ನು ಪತ್ತೆ ಹಚ್ಚಿ ನಮ್ಮ ವಾಹನವನ್ನು ನಮಗೆ ಹುಡುಕಿಕೊಟ್ಟು ತಪ್ಪಿತಸ್ಥರು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಟ್ರ್ಯಾಕ್ಟರ್ ಮಾಲೀಕ ದೇವರಾಜು ಸಾತನೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.