Friday, March 27, 2026
Google search engine

Homeರಾಜ್ಯಸುದ್ದಿಜಾಲಶಾರ್ಟ್‌ಕಟ್‌ಗಾಗಿ ನದಿಗೆ ಟ್ರ್ಯಾಕ್ಟರ್ ನುಗ್ಗಿಸಿದ ಭೂಪ!

ಶಾರ್ಟ್‌ಕಟ್‌ಗಾಗಿ ನದಿಗೆ ಟ್ರ್ಯಾಕ್ಟರ್ ನುಗ್ಗಿಸಿದ ಭೂಪ!

ವಿಜಯಪುರ : ಶಾರ್ಟ್‌ಕಟ್ ದಾರಿಗಾಗಿ ಚಾಲಕನೊಬ್ಬ ಟ್ರ್ಯಾಕ್ಟರ್’ನ್ನು ತುಂಗಭದ್ರಾ ನದಿಗೆ ನುಗ್ಗಿಸಿದ್ದು, ಪರಿಣಾಮ 10ಕ್ಕೂ ಹೆಚ್ಚು ಮಂದಿ ನದಿ ಮಧ್ಯೆ ಸಿಲುಕಿ ಜೀವಭಯದಲ್ಲಿ ಪರದಾಡಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದ್ದು, ಭಕ್ತರು ತುಂಗಭದ್ರಾ ನದಿ ದಾಟಿ ಸಿಂಗಟಾಳೂರು ವೀರಭದ್ರೇಶ್ವರ ಜಾತ್ರೆಗೆ ತೆರಳುತ್ತಿದ್ದರು. ಈ ವೇಳೆ ಘಟನೆ ನಡೆದಿದೆ.

ವಿಜಯನಗರ ಜಿಲ್ಲೆಯ ಹಡಗಲಿ ತಾಲ್ಲೂಕಿನ ನವಲಿ ಗ್ರಾಮದ ಭಕ್ತರು ಸಾಮಾನ್ಯವಾಗಿ ರಸ್ತೆ ಮಾರ್ಗ ಬಳಸುವುದಾದರೂ, ತಡವಾಗಬಹುದು ಎಂಬ ಕಾರಣಕ್ಕೆ ಶಾರ್ಟ್‌ಕಟ್ ಆಯ್ಕೆ ಮಾಡಿಕೊಂಡಿದ್ದಾರೆ. ಚಾಲಕನೂ ನೀರಿನ ಮಟ್ಟ ಕಡಿಮೆ ಇದೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ, ಎಲ್ಲರೂ ಟ್ರ್ಯಾಕ್ಟರ್ ಮೂಲಕ ನದಿಯನ್ನು ದಾಟಲು ಮುಂದಾಗಿದ್ದರು.

ಆದರೆ, ಟ್ರ್ಯಾಕ್ಟರ್ ನದಿ ಮಧ್ಯ ಭಾಗಕ್ಕೆ ತಲುಪಿದಾಗ ಚಾಲಕ ಗಾಬರಿಗೊಂಡಿದ್ದಾನೆ. ಇದೇ ವೇಳೆ ನೀರಿನ ಮಟ್ಟ ಹೆಚ್ಚಾಗಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಮುಳುಗಲು ಆರಂಭಿಸಿದ್ದು, ನೀರು ಕುತ್ತಿಗೆಯ ಮಟ್ಟಕ್ಕೆ ತಲುಪುತ್ತಿದ್ದಂತೆ ಭಕ್ತರು ಭಯದಿಂದ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

ಈ ಸಂದರ್ಭ ಸ್ಥಳದಲ್ಲಿದ್ದ ಮೀನುಗಾರರು ತಕ್ಷಣ ಧಾವಿಸಿ, ತಮ್ಮ ಜೀವದ ಹಂಗು ತೊರೆದು ಎಲ್ಲ ಭಕ್ತರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ನಂತರ ಕ್ರೇನ್ ಸಹಾಯದಿಂದ ಟ್ರ್ಯಾಕ್ಟರ್ ಅನ್ನು ನದಿಯಿಂದ ಹೊರತೆಗೆದಿದ್ದಾರೆ. ಘಟನೆಯ ಕುರಿತು ಟ್ರ್ಯಾಕ್ಟರ್ ನಲ್ಲಿದ್ದ ಭಕ್ತನೋರ್ವ ಪ್ರತಿಕ್ರಿಯಿಸಿ, ಚಾಲಕನ ಮಾತು ನಂಬಿ ನಾವು ಒಪ್ಪಿದ್ದೆವು. ನಮಗೆ ಅಪಾಯ ಇದೆ ಎಂಬುದು ತಿಳಿದಿದ್ದರೂ ಹೋಗಿದ್ದೆವು. ದೇವರ ಕೃಪೆಯಿಂದ ಬದುಕಿದ್ದೇವೆ. ನಮ್ಮನ್ನು ರಕ್ಷಿಸಿದ ಮೀನುಗಾರರಿಗೆ ಧನ್ಯವಾದಗಳು. ಇಂತಹ ಶಾರ್ಟ್‌ಕಟ್ ಮಾರ್ಗಗಳನ್ನು ಯಾರೂ ಬಳಸಬಾರದು ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular