Monday, April 21, 2025
Google search engine

Homeರಾಜ್ಯಸುದ್ದಿಜಾಲಪತ್ರಕರ್ತರಿಗೆ ಮತ್ತು ಸಾಧಕರಿಗೆ ಗೌರವಾರ್ಪಣೆ

ಪತ್ರಕರ್ತರಿಗೆ ಮತ್ತು ಸಾಧಕರಿಗೆ ಗೌರವಾರ್ಪಣೆ

ಚನ್ನಪಟ್ಟಣ: ಬೊಂಬೆನಾಡಿನ ಪತ್ರಕರ್ತರು ನಮ್ಮ ಹೆಮ್ಮೆಯಾಗಿದ್ದಾರೆ ಎಂದು ಹಿಂದುಳಿತ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಮೋಹನ್ ಅವರು ಬಣ್ಣಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡರ ನೇತೃತ್ವದಲ್ಲಿ ವಿಶ್ವ ಪತ್ರಕರ್ತರ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಪತ್ರಕರ್ತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿ, ಸಮಾಜದಲ್ಲಿನ ಅಂಕು ಡೋಕುಗಳನ್ನು ತಿದ್ದಿ ಉತ್ತಮ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಆದರೆ ಬೇರೆ ತಾಲೂಕಿನಲ್ಲಿ ಕೆಲ ಪತ್ರಕರ್ತರು ಐಡಿ ಕಾರ್ಡ್‌ಗಳನ್ನು ಎಟಿಎಂ ಕಾರ್ಡ್‌ಗಳನ್ನು ಮಾಡಿಕೊಂಡಿದ್ದು, ಸರ್ಕಾರಿ ಕಚೇರಿಗಳಲ್ಲಿ ಇಲ್ಲದ ದಾಖಲೆಗಳನ್ನು ಕೇಳಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದು ಇದರ ಅನುಭವವೂ ನನ್ನಗೆ ಆಗಿದೆ. \

ಆದರೆ ನಮ್ಮ ತಾಲೂಕಿನಲ್ಲಿ ಇಷ್ಟು ವರ್ಷ ಸೇವೆ ಮಾಡಿದ್ದು ಯಾವುದೇ ಸರ್ಕಾರಿ ಇಲಾಖೆಗಳಲ್ಲಿ ನಾವು ಪತ್ರಕರ್ತರು ಎಂದು ಯಾರಲ್ಲೂ ಹಣಕ್ಕೆ ಕೈ ಚಾಚಿದ ಉದಾಹರಣೆ ಕಂಡುಬರಲಿಲ್ಲ. ಈ ನಿಟ್ಟಿನಲ್ಲಿ ತಾಲೂಕಿನ ಪತ್ರಕರ್ತರು ನಮ್ಮ ಹೆಮ್ಮೆಯಾಗಿದ್ದಾರೆ ಎಂದು ಬಣ್ಣಿಸಿದರು. ತಾ.ಪಂ. ಮಾಜಿ ಸದಸ್ಯ ಮತ್ತೀಕೆರೆ ಹನುಮಂತಯ್ಯ ವರು ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಕೊಡುಗೆ ಎಷ್ಟು ಮುಖ್ಯವೋ ಅದೇ ನಿಟ್ಟಿನಲ್ಲಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪತ್ರಕರ್ತರ ಕೊಡುಗೆಯೂ ಅಪಾರವಾಗಿದೆ. ಸಮಾಜದ ಓರೆ-ಕೋರೆಗಳನ್ನು ತಿದ್ದು ಶಾಸಕಾಂಗ ಮತ್ತು ನ್ಯಾಯಾಂಗ ಮತ್ತು ಕಾರ್ಯಾಗದ ನಡುವೆ ಸೇತುವೆಯಾಗಿ ಸೇವೆ ನೀಡುತ್ತಾ ಸಮಾಜದ ಒಳಿತಿಗೆ ಶ್ರಮಿಸುತ್ತ್ತಾ ಬಂದಿರುವ ಪತ್ರಕರ್ತರ ಸೇವೆಯನ್ನು ಗುರುತಿಸಿ ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ಗೌರವಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಪತ್ರಕರ್ತರ ಹು.ದೊಡ್ಡಿ ರಮೇಶ್‌ಅವರು ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರನ್ನು ಸರ್ಕಾರಗಳು ಕಡೆಗಣಿಸಿದರು ಸಂಘಸಂಸ್ಥೆಗಳ ಮೂಲಕ ಗೌರವಿಸುತ್ತಿರುವುದು ಶ್ಲಾಘನೀಯವಾಗಿದ್ದು ಕನ್ನಡ ನಾಡಿ ಅಸ್ಮಿತೆಗೆ ಧಕ್ಕೆ ಬಂದಾಗ ಮೊದಲು ಧ್ವನಿ ಎತ್ತುವ ರಮೇಶ್‌ಗೌಡರು ತಾವೊಬ್ಬರು ಸಂಪಾದಕರಾಗಿದ್ದು ಇತರೆ ಪತ್ರಕರ್ತರನ್ನು ಗೌರವಿಸಬೇಕು ಎಂದು ನಮ್ನನು ಗೌರವಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು.

ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ಮಾತನಾಡಿ, ಹಣ್ಣುಮಕ್ಕಳು ಶಿಕ್ಷಣ ಪಡೆಯುವಲ್ಲೇ ಎಷ್ಟೇ ಸಾಧನೆ ಮಾಡಿದರೂ ಸಹ ಗೃಹಿಣಿಯಾದ ಬಳಿಕ ಶಿಕ್ಷಣದಲ್ಲಿ ಸಾಧನೆ ಮಾಡುವುದು ಸುಲಭವಿಲ್ಲ. ಇಂತಹ ಸಂದರ್ಭದಲ್ಲಿ ಅಕ್ಕೂರುಹೊಸಹಳ್ಳಿಯ ರಮ್ಯ ಚಿನ್ನಗಿರಿಗೌಡ ಅವರು ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿರುವುದು ದೊಡ್ಡ ಸಾಧನೆಯಾಗಿದ್ದು ಇದು ನಮ್ಮ ತಾಲೂಕಿಗೂ ಹೆಮ್ಮೆಯಾಗಿದೆ ಎಂದರು. ಜೊತೆಗೆ ನಿಸ್ವಾರ್ಥ ಸೇವೆ ಮಾಡಿ ಸಾವಿರಾರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ತಮ್ಮದೇ ಪಾತ್ರ ವಹಿಸಿರುವ ಹಿಂದುಳಿತ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಮೋಹನ್‌ಅವರ ತತ್ವಾದರ್ಶಗಳು ಇತರೆ ಅಧಿಕಾರಿಗಳಿಗೆ ಮಾರ್ಗದರ್ಶನವಾಗಿದೆ ಎಂದು ಬಣ್ಣಿಸಿದರು. ಜೊತೆಗೆ ನಾಡಿನ ಸಾಂಸ್ಕೃತಿಕ ರಾಯಬಾರಿಯಾಗಿರುವ ಅಂತರಾಷ್ಟ್ರೀಯ ಜನಪದ ಗಾಯಕ ಹೊಳಸಾಲಯ್ಯ ಅವರನ್ನು ಅಭಿನಂದಿಸುವುದು ನಮ್ಮೆಲ್ಲರ ಸೌಭಾಗ್ಯ ಎಂದರು. ಜೊತೆಗೆ ನಾನು ವೈದ್ಯರಾಗಬೇಕು, ವಕೀರಾಗಬೇಕು, ಇಂಜಿನಿಯರ್ ಆಗಬೇಕು ಎಂದೆಲ್ಲಾ ಪೈಪೋಟಿ ಮಾಡುವ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಬಿ.ಪಿ.ಬಾನುಪ್ರಸಾದ್‌ಅವರ ಪುತ್ರಿ ಹರ್ಷಿತ ಅವರು ಬೆಂಗಳೂರು ನಗರ ವಿವಿ ಯಲ್ಲಿ ಡಿಜಿಟಲ್ ವಿಷ್ಯೂಯಲ್ ತಂತಜ್ಞಾನದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿರುವುದು ಶ್ಲಾಘನೀಯವಾಗಿದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿಂದುಳಿದ ವರ್ಗಗಳ ಇಲಾಖೆಯ ನಿವೃತ್ತ ಅಧಿಕಾರಿ ಎನ್,. ಮೋಹನ್, ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ರಮ್ಯ ಚಿನ್ನಗಿರಿಗೌಡ, ಬೆಂಗಳೂರು ಯೂನಿವರ್ಸಿಟಿಯಲ್ಲಿ ವಿಶೂಯಲ್ಸ್ ಆರ್ಟ್ಸ್‌ನಲ್ಲಿ ಮೊದಲ ರ್‍ಯಾಂಕ್ ಪಡೆದ ಹರ್ಷಿತಾ, ಇಂಟರ್ ನ್ಯಾಷನಲ್ ಯೋಗ ಶಿವಕುಮಾರ್, ಜನಪದ ಕಲಾವಿದ ಹೆಚ್.ಸಿ. ಹೊಲಸಾಲಯ್ಯ, ನಿವೃತ್ತ ಉಪಪ್ರಾಂಶುಪಾಲರದ ಸಿ.ಬಿ. ಕುಮಾರ್, ಪತ್ರಕರ್ತರುಗಳಾದ ವಿಜೇಂದ್ರರಾವ್, ಶಿವಮಾಧು, ಸೈಯದ್ ಅಬ್ದುಲ್ ಕರೀಂ, ಗುರುಮೂರ್ತಿ, ಲಕ್ಷ್ಮೀಪತಿ, ರಮೇಶ್ ಹುಚ್ಚಯ್ಯನದೊಡ್ಡಿ, ರಮೇಶ್ ಅಕ್ಕೂರು, ನಟರಾಜ್ ಬೆಳಕವಾಡಿ, ಶಂಕರ್ ಆರ್., ಮಹೇಶ್ ಮೆಂಗಹಳ್ಳಿ, ಸುರೇಶ್, ಚಿನ್ನಗಿರಿಗೌಡ, ಮಂಜುನಾಥ್, ಚೇತನ್, ಅಭಿಲಾಷ್‌ಗೌಡ, ವಿಲ್ಸನ್ ವಿಜಿ, ಗೊ.ರಾ. ಶ್ರೀನಿವಾಸ್, ವಿಶ್ವಾಸ್ ಕುಮಾರ್, ಮಂಜುನಾಥ್ ಎಲೆಕೇರಿ, ಕೃಷ್ಣಮೂರ್ತಿ, ಶಶಿಕುಮಾರ್, ಪ್ರದೀಪ್, ಅಭಿಲಾಷ್ ಗೌಡ, ಕುಮಾರ್, ಶಿವಶಂಕರ್, ದರ್ಶನ್, ಮಹೇಶ್‌ರವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯರುಗಳಾದ ಭಾನುಪ್ರಸಾದ್, ನಿಂಗೇಗೌಡ (ಎನ್.ಜಿ). ನಿ. ಪ್ರಾಂಶುಪಾಲರು, ನಗರಸಭಾ ಮಾಜಿ ಸದಸ್ಯ ಲೋಕೇಶ್, ವಕೀಲರಾದ ಶಿವರಾಜೇಗೌಡ, ಕಕಜವೇ ರಾಜ್ಯ ಉಪಾಧ್ಯಕ್ಷ ರಂಜಿತ್‌ಗೌಡ, ಸಂಘಟನಾ ಕಾರ್ಯದರ್ಶಿ, ಆಟೋ ಘಟಕದ ಅಧ್ಯಕ್ಷ ವೆಂಕಟೇಶ್, ರಮೇಶ್ ಹೊಟ್ಟಿಗನಹೊಸಹಳ್ಳಿ ವಿಧಾನಸೌಧ ರಮೇಶ್, ರಾಮಕೃಷ್ಣಪ್ಪ, ಸಿಂಗರಾಜಿಪುರ, ಕುಮಾರ್ ಬುಕ್ಕಸಾಗರ, ಮೆಣಸಗಿನಹಳ್ಳಿ ರಾಮಕೃಷ್ಣಪ್ಪ, ಪುಟ್ಟರಾಜು ಹೊಂಗನೂರು, ಶ್ಯಾಮ್, ಚೌಡಯ್ಯ ಚಿಕ್ಕಲೂರು, ಯೋಗಲಿಂಗು ಕನ್ನಸಂದ್ರ, ನಿ. ಗ್ರಾಮ ಲೆಕ್ಕಾಧಿಕಾರಿ ಮುಕುಂದ, ನಿ. ಶಿಕ್ಷಕ ಪುಟ್ಟಪ್ಪಾಜಿ, ಸಂಕಲಗೆರೆ ಹುಚ್ಚಯ್ಯ, ಡ್ರೈವರ್ ಶಿವಣ್ಣ, ಚಿಕ್ಕೇನಹಳ್ಳಿ ಸಿದ್ದಪ್ಪಾಜಿ, ನಿ. ಅದಿಕಾರಿ ಶಿವಣ್ಣ, ಸುಮ, ತಸ್ಮೀಯಾ ಬಾನು, ರಾಜಮ್ಮ ಹೊಡಿಕೆಹೊಸಹಳ್ಳಿ, ಕುಮಾರ್ ಕೋಟಮಾರನಹಳ್ಳಿ, ಹೊನ್ನಪ್ಪ, ಮಂಗಳವಾರಪೇಟೆ ಸತೀಶ್, ಬೀರೇಶ್, ರವಿ, ಬ್ಯಾನರ್ ವೆಂಕಟೇಶ್, ಶಶಿಕುಮಾರ್, ಜಯರಾಂ, ಮೆಣಸಿಗನಹಳ್ಳಿ ಮಹೇಶ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular