Friday, April 11, 2025
Google search engine

Homeರಾಜ್ಯಸುದ್ದಿಜಾಲನಗರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡಿರುವ ಶ್ರೀಮತಿ ಶಾಂತಲಾ ಪ್ರಸಾದ್ ರನ್ನು ಗೌರವಿಸಿ ಸನ್ಮಾನ

ನಗರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡಿರುವ ಶ್ರೀಮತಿ ಶಾಂತಲಾ ಪ್ರಸಾದ್ ರನ್ನು ಗೌರವಿಸಿ ಸನ್ಮಾನ

ಚಾಮರಾಜನಗರ: ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಸರ್ಕಾರದಿಂದ ನೂತನವಾಗಿ ನಗರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡಿರುವ ಶ್ರೀಮತಿ ಶಾಂತಲಾ ಪ್ರಸಾದ್ ರವರನ್ನು ಅವರ ಸ್ವಗೃಹದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಜಿಎಂ ಹೆಗಡೆ ಮಾತನಾಡಿ ಚಾಮರಾಜನಗರ ಸಭೆಗೆ ನೂತನವಾಗಿ ಸರ್ಕಾರದಿಂದ ನೇಮಕಗೊಂಡಿರುವ ಶಾಂತಲಾ ಪ್ರಸಾದ್ ರವರು ಸಮಾಜದ ಕಾರ್ಯಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡು ಕಾರ್ಯನಿರ್ವಹಿಸಿ ಉತ್ತಮ ಸೇವೆಯನ್ನು ಸಲ್ಲಿಸಲಿ ಎಂದು ತಿಳಿಸಿ ಸನ್ಮಾನಿಸಿದರು.

ಜಿಲ್ಲಾ ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಋಗ್ವೇದಿ ಮಾತನಾಡಿ ಶ್ರೀಮತಿ ಶಾಂತಲಾ ಪ್ರಸಾದ್ ರವರು ಸಮಾಜದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಸೇವೆ ಪೂರ್ವಜನ್ಮದ ಪುಣ್ಯದ ಫಲ. ಹುಟ್ಟೂರಿಗೆ ಸೇವೆ ಸಲ್ಲಿಸುವುದು ನಿಜವಾಗಿ ಭಗವಂತನ ಕಾರ್ಯ. ಸದಾಕಾಲ ಒಳ್ಳೆಯದನ್ನು ಬಯಸಿ, ಉತ್ತಮವಾಗಿ ಸೇವೆ ಸಲ್ಲಿಸೋಣ. ಅಧಿಕಾರವೆಂಬುದು ಸೇವೆಗೆ ಇರುವ ವಿಶಿಷ್ಟವಾದ ಒಂದು ಅವಕಾಶ. ಅಧಿಕಾರದಿಂದ ಅಹಂಕಾರ ಪಡದೆ ಸೇವೆಯನ್ನು ಸಲ್ಲಿಸೋಣ. ಸಮಾಜದ ಋಣವನ್ನು ತೀರಿಸೋಣ. ಸಮಾಜಕ್ಕೆ ಮತ್ತು ನಗರಕ್ಕೆ ಉತ್ತಮ ಸೇವೆ ಸಲ್ಲಿಸಿ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಶ್ರೀಮತಿ ವತ್ಸಲ ರಾಜಗೋಪಾಲ್, ಶ್ರೀಧರ್ ಕೆಂಪನಪುರ, ನಾಗೇಂದ್ರ ಪ್ರಸಾದ್, ಸತೀಶ್, ಡಿ ಮುರುಗೇಶ್, ಸುದರ್ಶನ್,ನಾಗಶ್ರೀ, ಸತೀಶ್ ಕುಮಾರ್, ಶ್ರೀನಾಥ್, ಬಿಳಿಗಿರಿ ಶ್ರೀನಿವಾಸ್, ಲಕ್ಷ್ಮಿನರಸಿಂಹ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular