ಮೈಸೂರು: ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಾಮಸ್ವಾಮಿ ವೃತದಲ್ಲಿ ವಾಹನ ಸವಾರರಿಗೆ ಹಾಗೂ ರಸ್ತೆ ಬದಿಯಲ್ಲಿ ನಿಂತಿರುವ ಸಾರ್ವಜನಿಕರಿಗೆ ಗಣೇಶನ ವೇಷದಾರಿ ಧರಿಸಿ ರಕ್ತದಾನದ ಮಹತ್ವದ ಅರಿವು ಮೂಡಿಸುವ ಕರಪತ್ರವನ್ನು ಗಣೇಶ ವೇಷದಾರಿ ಹಳೆ ಕೆಸರೆ ನಿವಾಸಿ ಲೋಹಿತ್ ರವರು ಸವಾರರಿಗೆ ಜಾಗೃತಿಯ ನಾಮಫಲಕ ಹಿಡಿದು ಕರಪತ್ರ ನೀಡಿ ವಿಶೇಷವಾಗಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ನಾವು ನಿರಂತರವಾಗಿ ರಕ್ತದಾನ ಬಗ್ಗೆ ಹಲವಾರು ತರ ಜಾಗೃತಿ ಮೂಡಿಸುತ್ತಾ ಬಂದಿದ್ದೇವೆ, ನಾಳೆ ಗೌರಿ ಗಣೇಶ ಹಬ್ಬ ಇರುವ ಹಿನ್ನೆಲೆಯಲ್ಲಿ ಒಂದು ವಿಭಿನ್ನವಾಗಿ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿದ್ದೇವೆ, ರಕ್ತದಾನ ಮಹಾದಾನ ಮೂಢನಂಬಿಕೆಯನ್ನು ಬಿಟ್ಟು
ಸಾರ್ವಜನಿಕರು ಸ್ವಯಂ ಪ್ರೇರಿತ ರಕ್ತದಾನ ಮಾಡಬಹುದು ಎಂದು ಹೇಳಿದರು, ನೀವು ನೀಡುವ ರಕ್ತದಿಂದ ಇನ್ನೊಂದು ಜೀವ ಉಳಿಸಬಹುದು ಎಂದು ಹೇಳಿದರು ದಯಮಾಡಿ ಯುವ ಪೀಳಿಗೆ ನಿರಂತರವಾಗಿ ಸ್ವಯಂ ಪ್ರೇರಿತ ರಕ್ತದಾನ ಮಾಡಲಿ ಎಂದು ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ಕೆ ಎಂ ಪಿ ಕೆ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಸೂರಜ್, ಸದಾಶಿವ್, ಚಂದ್ರು, ಹಾಗೂ ಇನ್ನಿತರರು ಹಾಜರಿದ್ದರು