Wednesday, August 20, 2025
Google search engine

Homeರಾಜ್ಯಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗ: ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಬಿಲ್ ತಿರಸ್ಕಾರ

ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗ: ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಬಿಲ್ ತಿರಸ್ಕಾರ

ಬೆಂಗಳೂರು: ರಾಜ್ಯ ಸರ್ಕಾರದ ಬಹಳ ಮುಖ್ಯವಾದ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯೆಕಕ್ಕೆ ಹಿನ್ನಡೆ ಆಗಿದ್ದು, ವಿರುದ್ಧವಾಗಿ ಮತ ಬಂದ ಹಿನ್ನೆಲೆ ಬಿಲ್‌ ತಿರಸ್ಕಾರಗೊಂಡಿದೆ.

 ರಾಜ್ಯ ಸರ್ಕಾರಕ್ಕೆ ಹಿನ್ನಡೆ: ಕೆಲ ಸಮಯದ ಹಿಂದೆ ರಾಜ್ಯ ಸರ್ಕಾರ ಕರ್ನಾಟಕ ಸೌಹಾರ್ದ ಸಹಕಾರಿ ವಿಧೇಯೆಕವನ್ನ ಮಂಡಿಸಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿರೋಧ ಪಕ್ಷ ಬಿಜೆಪಿ ಸದಸ್ಯರು ಮತಕ್ಕೆ ಹಾಕುವಂತೆ ಆಗ್ರಹ ಮಾಡಿದ್ದರು. ನಂತರ ಈ ವಿಧೇಯೆಕವನ್ನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತಕ್ಕೆ ಹಾಕಿದ್ದರು. ಈ ಸಮಯದಲ್ಲಿ ವಿಲ್‌ ವಿರುದ್ಧವಾಗಿ ಹೆಚ್ಚಿನ ಮತ ಬಂದಿದೆ. ಹಾಗಾಗಿ ಈಗ ಈ ಬಿಲ್‌ ತಿರಸ್ಕಾರವಾಗಿದೆ.  ಇದರಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.

 ವಿರುದ್ದ ಮತ ಹಾಕಲು ಮನವಿ ಮಾಡಿದ್ದ ಬಿಜೆಪಿ: ಇನ್ನು ಈ ಹೊಸ ವಿಧೇಯೆಕದ ವಿರುದ್ಧ ಮತ ಹಾಕುವಂತೆ ಬಿಜೆಪಿ ಸದಸ್ಯರು ಆಗ್ರಹ ಮಾಡಿದ್ದರು. ಅದರಂತೆ ಇಂದು ಮತ ಹಾಕುವ ಪ್ರಕ್ರಿಯೆ ನಡೆದಿದ್ದು, ಮತ ಹಾಕುಲು ಸದಸ್ಯರು ಒಳಗೆ ಬರಲು ಬಸವರಾಜ್‌ ಹೊರಟ್ಟಿ ಅವರು 2 ನಿಮಿಷಗಳ ಸಮಯ ಕೊಟ್ಟಿದ್ದರು. 2 ನಿಮಿಷ ನಂತರ ಬಂದವರಿಗೆ ಪ್ರವೇಶ ಕೊಟ್ಟಿರಲಿಲ್ಲ. ಇದರ ನಂತರ ಬಿಲ್‌ ಪರವಾಗಿ ಕಾಂಗ್ರೆಸ್‌ನ 24 ಮತಗಳು ಬಂದಿದ್ದರೆ, ಬಿಲ್‌ ವಿರೋಧವಾಗಿ ಬಿಜೆಪಿ-ಜೆಡಿಎಸ್‌ನ 26 ಮತಗಳು ಬಂದ ಕಾರಣ, ಬಿಲ್‌ ತಿರಸ್ಕಾರಗೊಂಡಿದೆ.

ಮೂರು ವಿಧೇಯಕಗಳನ್ನು ವಾಪಸ್‌ ಪಡೆದ ರಾಜ್ಯ ಸರ್ಕಾರ
2024 ರಲ್ಲಿ ಮಂಡಿಸಲಾಗಿದ್ದ ಮೂರು ಮಹತ್ವದ ವಿಧೇಯಕಗಳನ್ನು ಬುಧವಾರ ಸದನದಲ್ಲಿ ವಾಪಸ್‌ ಪಡೆಯಲಾಗಿದೆ. ಇಂದು ನಡೆದ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

2024 ನೇ ಸಾಲಿನ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೆಯಕ, ಕರ್ನಾಟಕ ಸಹಕಾರಿ ಸಂಘಗಳ (ತಿದ್ದುಪಡಿ) ವಿಧೇಯಕ, ಹಾಗೂ 2024 ರ ಕರ್ನಾಟಕ ನೋಂದಣಿ (ತಿದ್ದುಪಡಿ ) ವಿಧೇಯಕಗಳನ್ನು ಸದನದಲ್ಲಿ ವಾಪಸ್‌ ಪಡೆಯಲಾಯಿತು.

ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಅವರು ಈ ಮೂರು ವಿಧೇಯಕಗಳನ್ನು ಹಿಂಪಡೆಯಲು ಮನವಿ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧೇಯಕಗಳನ್ನು ಹಿಂಪಡೆಯಲು ಅನುಮತಿ ಕೋರಿದರು. ಈಗಾಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡು ನೂತನ ವಿಧೇಯಕ ಜಾರಿಗೊಳಿಸಲಾಗಿದೆ. ಹೀಗಾಗಿ ಇವುಗಳ ಅಗತ್ಯ ಈಗ ಪ್ರಯೋಜನಕ್ಕೆ ಬರುವುದಿಲ್ಲ. ಈ ಕಾರಣದಿಂದ ಸಭಾಧ್ಯಕ್ಷರು ಸೂಚಿತ ವಿಧೇಯಕಗಳನ್ನು ಹಿಂಪಡೆಯಬೇಕೆಂದು ಕೋರಿದರು.

ಸಭಾಧ್ಯಕ್ಷರು ಈ ವಿಧೇಯಕಗಳನ್ನು ಹಿಂಪಡೆದಿರುವುದಾಗಿ ಘೋಷಿಸಿದರು. ಎರಡು ದಿನಗಳ ಹಿಂದಷ್ಟೇ ಸಚಿವ ಕೃಷ್ಣ ಬೈರೇಗೌಡ ಕಂದಾಯ ಹಾಗೂ ನೋಂದಣಿ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ಒಳಗೊಂಡ ನೂತನ ಮಸೂದೆಯನ್ನು ಮಂಡಿಸಿದ್ದರು. ಆದರೆ ಇದೀಗ ಮೂರು ವಿಧೇಯೆಕಗಳನ್ನ ರಾಜ್ಯ ಸರ್ಕಾರ ಹಿಂದಕ್ಕೆ ತೆಗೆದುಕೊಂಡಿದೆ.

RELATED ARTICLES
- Advertisment -
Google search engine

Most Popular