Friday, April 4, 2025
Google search engine

Homeರಾಜ್ಯಸುದ್ದಿಜಾಲ"ಸ್ಮಾರ್ಟ್ ವಿಲೇಜ್" ಥೀಮ್ ಅಡಿಯಲ್ಲಿ ರೋಬೋಟಿಕ್ ಮಾದರಿಗಳನ್ನು ರಚಿಸುವ ಮೂಲಕ ಪೂರ್ಣ ಚೇತನ ವಿದ್ಯಾರ್ಥಿಗಳ ವಿಶ್ವ...

“ಸ್ಮಾರ್ಟ್ ವಿಲೇಜ್” ಥೀಮ್ ಅಡಿಯಲ್ಲಿ ರೋಬೋಟಿಕ್ ಮಾದರಿಗಳನ್ನು ರಚಿಸುವ ಮೂಲಕ ಪೂರ್ಣ ಚೇತನ ವಿದ್ಯಾರ್ಥಿಗಳ ವಿಶ್ವ ದಾಖಲೆ

ಮೈಸೂರು: ನಗರದ ಎಚ್ ಡಿ ಕೋಟೆ ರಸ್ತೆಯ ಪೂರ್ಣ ಚೇತನ ಶಾಲೆಯ 132 ವಿದ್ಯಾರ್ಥಿಗಳು ದೇಶದ ಗ್ರಾಮೀಣ ಪ್ರದೇಶಗಳ ಜನರು, ರೈತರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರದ ರೂಪದಲ್ಲಿ ಶನಿವಾರ ನಿರ್ಮಿಸಿದ “ಸ್ಮಾರ್ಟ್ ವಿಲೇಜ್” ನ ಮಾದರಿ ವಿಶ್ವದಾಖಲೆಗಳ ಪಟ್ಟಿ ಸೇರಿತು.

ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್‌ ಮೂಲಕ ಈ 132 ವಿದ್ಯಾರ್ಥಿಗಳು 68 ತಂಡಗಳಾಗಿ ಶನಿವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 11:52 ರವರೆಗೆ ಸತತ 16 ಗಂಟೆಗ 52 ನಿಮಿಷಗಳಷ್ಟು ಅವಧಿಯಲ್ಲಿ ತಮ್ಮ ಕನಸಿನ ಹಳ್ಳಿಯನ್ನು ರೂಪಿಸಿದರು.

ಎಸ್ ಜೆ ಸಿ ಇ -ಎಸ್ ಟಿ ಇ ಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಬಿ ಭಾನುವಾರ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೃಜನಶೀಲತೆ ಹಾಗು ಉದ್ಯಮಶೀಲತೆಯನ್ನು ವಿದ್ಯಾರ್ಥಿಗಳು ಎಳವೆಯಲ್ಲೇ ರೂಡಿಸಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಾಲೆಯ ಅಧ್ಯಕ್ಷ ಡಾ. ವಿದ್ಯಾಸಾಗರ್ ಪಿ., ದರ್ಶನ್ ರಾಜ್, ಸಿಇಒ ಪೂರ್ಣ ಚೇತನ ಪಬ್ಲಿಕ್ ಸ್ಕೂಲ್, ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ, ಡೀನ್ ಲಾವಣ್ಯ, ಪ್ರಾಂಶುಪಾಲರು – ಪ್ರಿಯಾಂಕಾ ಬಿ, ವಿದ್ಯಾರ್ಥಿಗಳು, ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular