Friday, April 11, 2025
Google search engine

Homeಸ್ಥಳೀಯಮುಸಲ್ಮಾನ್ ಬಾಂಧವರಿಗೆ ಎಳ್ಳು-ಬೆಲ್ಲ ಬೀರುವ ಮೂಲಕ ಭಾವೈಕ್ಯತೆ ಸಂದೇಶ ನೀಡಿದ ಮೈಸೂರು ಯುವ ಬಳಗ

ಮುಸಲ್ಮಾನ್ ಬಾಂಧವರಿಗೆ ಎಳ್ಳು-ಬೆಲ್ಲ ಬೀರುವ ಮೂಲಕ ಭಾವೈಕ್ಯತೆ ಸಂದೇಶ ನೀಡಿದ ಮೈಸೂರು ಯುವ ಬಳಗ

ಮೈಸೂರು: ನಗರದ ದಿವಾನ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಮೈಸೂರು ಯುವ ಬಳಗದ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಇಂದು ಮುಸಲ್ಮಾನರ ಭಾವೈಕ್ಯತೆ ಬೆಸೆಯುವ ನಿಟ್ಟಿನಲ್ಲಿ ಶಾಸಕರಾದ ಹರೀಶ್ ಗೌಡ ರವರ ಧರ್ಮಪತ್ನಿ ಗೌರಿ ರವರು ಗೋಪೂಜೆ ನೆರವೇರಿಸಿ ಆನಂತರ ಮುಸಲ್ಮಾನ್ ಬಾಂಧವರಿಗೆ ಎಳ್ಳು ಬೆಲ್ಲ ಬೀರಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗೌರಿ ಹರೀಶ್ ಗೌಡ ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ಧವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡವ ಯತ್ನಗಳು ನಡೆಯುತ್ತಿದ್ದು, ಆದ್ದರಿಂದ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು. ಈ ದಿನ ಈ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ಥರ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ಆದರೆ ಬಹಳ ಉತ್ತಮ ಬೆಳವಣಿಗೆ ರಾಜ್ಯದಲ್ಲಿ ಕಾಣಲು ಸಾಧ್ಯವಿದೆ ಎಂದರು.

ಈ ಸಂದರ್ಭದಲ್ಲಿ ಸೌಭಾಗ್ಯ ಗಿರೀಶ್, ಕರ್ನಾಟಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಮೈಸೂರು ಯುವ ಬಳಗದ ಅಧ್ಯಕ್ಷರಾದ ರವಿಚಂದ್ರ,ಆನಂದ,ಮಹಾದೇವ್, ಮಂಜುನಾಥ್, ನವೀನ, ಹರೀಶ್ ಗೌಡ,ವಕೀಲರು ಸೂರ್ಯ ಕುಮಾರ್, ನಂಜುಂಡಸ್ವಾಮಿ, ಚೆಲುವರಾಜ,ಜ್ಞಾನೇಶ, ಪವನ,ಮಹಿಳಾ ಮುಖಂಡರಾದ ಮಂಗಳ, ಶಾಂತ, ಲೀಲಾ, ರಾಣಿ, ಲೋಕೇಶ್, ನಿತಿನ್, ಸಂತೋಷ್, ಶ್ರೀನಿವಾಸ್ ಶೆಟ್ಟಿ,ಸಮೀರಾ, ಫಾತಿಮಾ, ಹಾಗೂ ಮುಸಲ್ಮಾನ್ ಬಾಂಧವರು ಮತ್ತು ಪೌರಕಾರ್ಮಿಕರು ಹಾಗೂ ಇನ್ನಿತರರು ಹಾಜರಿದ್ದರು

RELATED ARTICLES
- Advertisment -
Google search engine

Most Popular