Friday, April 4, 2025
Google search engine

HomeUncategorizedರಾಷ್ಟ್ರೀಯರೀಲ್ಸ್​ ಮಾಡಲು ಹೋಗಿ ಬಾವಿಗೆ ಬಿದ್ದು ಯುವಕ ಸಾವು

ರೀಲ್ಸ್​ ಮಾಡಲು ಹೋಗಿ ಬಾವಿಗೆ ಬಿದ್ದು ಯುವಕ ಸಾವು

ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ಆಯತಪ್ಪಿ ಬಾವಿಗೆ ಬಿದ್ದು, ಸಾವನ್ನಪ್ಪಿರುವ ಘಟನೆ ದೊಂಬಿವ್ಲಿಯ ಠಾಕುರ್ಲಿ ಪ್ರದೇಶದಲ್ಲಿ ನಡೆದಿದೆ.

ಠಾಕುರ್ಲಿಯ ಬ್ರಿಟಿಷರ ಕಾಲದ ಪಂಪ್ ಹೌಸ್‌ ನ ಬಾವಿಯಲ್ಲಿ ಮುಳುಗಿ ಈತ ಮೃತಪಟ್ಟಿದ್ದಾನೆ. ಯುವಕ ತನ್ನ ಇಬ್ಬರು ಸ್ನೇಹಿತರೊಂದಿಗೆ ತನ್ನ ಸಾಮಾಜಿಕ ಮಾಧ್ಯಮ ಖಾತೆಗಾಗಿ ರೀಲ್ ಶೂಟ್ ಮಾಡಲು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸತತ 32 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ವ್ಯಕ್ತಿಯ ಮೃತದೇಹವನ್ನು ಹುಡುಕಲಾಯಿತು. ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ ಮೃತರನ್ನು 18 ವರ್ಷದ ಬಿಲಾಲ್ ಸೊಹೈಲ್ ಶೇಖ್ ಎಂದು ಗುರುತಿಸಲಾಗಿದೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಬಿಲಾಲ್ ಬಾವಿಗೆ ಬೀಳುವುದನ್ನು ನೋಡಿದ ಇಬ್ಬರು ಸ್ನೇಹಿತರು ಸಹಾಯಕ್ಕಾಗಿ ಭದ್ರತಾ ಸಿಬ್ಬಂದಿಯ ಬಳಿಗೆ ಹೋದರು.

ಬಳಿಕ ವಿಷ್ಣುನಗರ ಠಾಣೆಗೆ ಮಾಹಿತಿ ನೀಡಿದ ಸಿಬ್ಬಂದಿ ಕೂಡಲೇ ಹುಡುಕಾಟ ಆರಂಭಿಸಿದ್ದಾರೆ. ಮುಂಬ್ರಾದ ಚಂದನಗರದ ನಿವಾಸಿಗಳಾದ ಮೂವರು ಸ್ನೇಹಿತರು ಕುಡಿದ ಅಮಲಿನಲ್ಲಿದ್ದರು ಎಂದು ಶಂಕಿಸಲಾಗಿದೆ.

ಬಿಲಾಲ್ ರೀಲ್ ಮಾಡುವ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆ ಎಂದು ಬಿಲಾಲ್ ಸ್ನೇಹಿತರು ಹೇಳಿದ್ದಾರೆ. ಬ್ರಿಟಿಷರ ಕಾಲದಲ್ಲಿ ಪಂಪ್ ಹೌಸ್ ನಿರ್ಮಿಸಲಾಗಿತ್ತು. ಅಲ್ಲದೆ ಈ ಸ್ಥಳಕ್ಕೆ ಜನರು ಬರುವುದು ಕಡಿಮೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular