Wednesday, April 9, 2025
Google search engine

Homeಅಪರಾಧಮದುವೆಯಾಗಲು ಹೆಣ್ಣು ಸಿಗಲಿಲ್ಲವೆಂದು ನೇಣಿಗೆ ಶರಣಾದ ಯುವಕ

ಮದುವೆಯಾಗಲು ಹೆಣ್ಣು ಸಿಗಲಿಲ್ಲವೆಂದು ನೇಣಿಗೆ ಶರಣಾದ ಯುವಕ

ಯಲ್ಲಾಪುರ: ಮದುವೆಯಾಗಲು ಹೆಣ್ಣು ಸಿಗಲಿಲ್ಲವೆಂಬ ಕಾರಣಕ್ಕೆ ಯುವಕನೊಬ್ಬ  ನೇಣಿಗೆ ಶರಣಾಗಿರುವ ಘಟನೆ ಯಲ್ಲಾಪುರ ತಾಲೂಕಿನ ತೇಲಂಗಾರ ಸಮೀಪದ ಕಿರಗಾರಿಮನೆ ಬಳಿ ನಡೆದಿದೆ.

ಕಿರಗಾರಿಮನೆಯ ನಾಗರಾಜ ಗಣಪತಿ ಗಾಂವ್ಕರ (35) ಮೃತ ವ್ಯಕ್ತಿ.

ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ನೊಂದುಕೊಂಡಿದ್ದ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಮನೆಯ ಸಮೀಪದ ಗುಡ್ಡದಲ್ಲಿ ಕವಲು ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೆಯಲ್ಲಿ ಈತ ತನ್ನ ತಂದೆ-ತಾಯಿಯೊಂದಿಗೆ ವಾಸವಾಗಿದ್ದನು. ಈತನ ಸಾವಿನ ಸಂಬಂಧ ಪೋಲಿಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular