ಚಾಮರಾಜನಗರ: ಬೀದಿನಾಯಿಯ ಮೂಕರೋದನೆಗೆ ಓಗೊಟ್ಟ ಯುವಕನೋರ್ವ ತನ್ನ ಜೀವವನ್ನು ಲೆಕ್ಕಿಸದೆ ಬಾವಿಗೆ ಬಿದ್ದಿದ್ದ ಬೀದಿ ನಾಯಿಯೊಂದನ್ನು ರಕ್ಷಣೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದಲ್ಲಿ ನಡೆದಿದೆ.
೨೦ ಅಡಿ ತೆರೆದ ಬಾವಿಗೆ ಬಿದ್ದು ಮೇಲೆ ಬರಲಾರದೇ ೨ ದಿನಗಳಿಂದ ನೀರಿನಲ್ಲಿ ಇರಲೂ ಆಗದೇ ತಿರುಚುತ್ತಾ ಒದ್ದಾಡುತ್ತಿದ್ದ ನಾಯಿ ಶಬ್ದವನ್ನು ಕೇಳಿ ಗೂಳೀಪುರ ನಾಗೇಂದ್ರ ಎಂಬುವವರು ಬಾವಿಗೆ ಇಳಿದು ಹಗ್ಗದ ಸಹಾಯದಿಂದ ನಾಯಿಯನ್ನು ಮೇಲಕ್ಕೆತ್ತಿದ್ದು, ಕೊನೆಗೂ ಅದರ ಜೀವವೊಂದು ಬದುಕಿದೆ.
ನಾಯಿಯು ಬಾವಿಗೆ ಬಿದ್ದ ಎರಡು ದಿನಗಳು ಕಳೆದಿದ್ದರೂ ಯಾರಿಗೂ ತಿಳಿದಿರುವುದಿಲ್ಲ ನಂತರ ಪಕ್ಕದಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಗೆ ಅದರ ಶಬ್ದಕ್ಕೆ ಕೇಳಿದೆ ನಂತರ ಗೂಳಿಪುರದ ನಾಗೇಂದ್ರ ಯುವಕ ಅದನ್ನು ಕಾಪಾಡಿದ್ದಾನೆ.