Wednesday, April 9, 2025
Google search engine

Homeರಾಜ್ಯಸುದ್ದಿಜಾಲಬೆನ್ನುಹುರಿ ಅಪಘಾತಕ್ಕೆ ಒಳಗಾಗಿ ಕಾಲು ಸ್ವಾಧೀನ, ಸ್ಪರ್ಶ ಜ್ಞಾನ ಕಳೆದುಕೊಂಡ ಯುವಕ; ಬೇಕಾಗಿದೆ ನೆರವಿನ ಸಹಾಯ...

ಬೆನ್ನುಹುರಿ ಅಪಘಾತಕ್ಕೆ ಒಳಗಾಗಿ ಕಾಲು ಸ್ವಾಧೀನ, ಸ್ಪರ್ಶ ಜ್ಞಾನ ಕಳೆದುಕೊಂಡ ಯುವಕ; ಬೇಕಾಗಿದೆ ನೆರವಿನ ಸಹಾಯ ಹಸ್ತ

ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುತ್ಯಾರು ಗ್ರಾಮದ 32 ಹರೆಯದ ಅನಿಲ್ ಪೂಜಾರಿ ಅವರು ತಮ್ಮ 17ನೆ ವಯಸ್ಸಿನಲ್ಲಿಯೇ ಮರದಿಂದ ಬಿದ್ದು ಬೆನ್ನುಹುರಿ ಅಪಘಾತದಿಂದ ದೇಹದ ಅರ್ಧ ಭಾಗದ ಅಂದರೆ ಸೊಂಟದ ಕೆಳಗಿನ ಭಾಗದ ಸ್ವಾಧೀನ ಹಾಗೂ ಸ್ಪರ್ಶ ಜ್ಞಾನ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ.

ಮರದಿಂದ ಬಿದ್ದು ಬೆನ್ನುಹುರಿ ಅಪಘಾತಕ್ಕೊಳಗಾದ ಅನಿಲ್ ಪೂಜಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶಸ್ತ್ರ ಚಿಕಿತ್ಸೆ ನಡೆಸಿದರೂ ಯಾವುದೇ ಪ್ರಯೋಜನವಾಗದೆ ಎದ್ದು ನಿಲ್ಲುವ, ನಡೆದಾಡುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ.

ಕಾಲುಗಳ ಸ್ವಾಧೀನ ಕಳೆದುಕೊಂಡ ಪರಿಣಾಮ ಮಲಗಿದ್ದಲ್ಲೆ ಇರುತ್ತಾರೆ. ವೀಲ್ ಚೇರ್ ನಲ್ಲಷ್ಟೆ ಓಡಾಡಲು ಶಕ್ತರಾಗಿದ್ದಾರೆ. ಬಡ ಕುಟುಂಬಕ್ಕೆ ಸೇರಿದ ಇವರಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಮಾನವೀಯ ಸಹೃದಯಗಳ ಸ್ಪಂದನದ ಅಗತ್ಯವಿದೆ. ಅನಿಲ್ ಪೂಜಾರಿ ಅವರಿಗೆ ಸಹಾಯ ಮಾಡಲು ಇಚ್ಚಿಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಣ ಜಮಾಯಿಸಬೇಕಾಗಿ ವಿನಂತಿ.
Anil Poojary
Canara Bank
A/C no 2409101009970
IFSC code CNRB0002409
Google pay
Phone pay
7204775875
Contact no 8197576815

RELATED ARTICLES
- Advertisment -
Google search engine

Most Popular