ಜಯಪುರ: ಸ್ನೇಹಿತನಿಂದ ಚಾಕು ಇರಿತಕ್ಕೊಳಗಾಗಿದ್ದ ಜಯಪುರ ಹೋಬಳಿಯ ಡಿ.ಸಾಲುಂಡಿ ಗ್ರಾಮದ ವಿಜಯ್ ಭಾಸ್ಕರ್(೩೨) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ವಿಜಯ್ ಭಾಸ್ಕರ್ ಮತ್ತು ಸ್ನೇಹಿತ ದೇವರಾಜ್ ಇಬ್ಬರೂ ಕೆಂಚಲಗೂಡು ಸಮೀಪದ ಬಾರ್ ಮುಂದೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದಾರೆ.
ಸ್ಥಳದಲ್ಲಿದ್ದವರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಬಳಿಕ ವಿಜಯ್ ತನ್ನ ಬೈಕ್‌ನಲ್ಲಿ ಸ್ನೇಹಿತ ಕಾರ್ತಿಕ್ ಜೊತೆ ಡಿ.ಸಾಲುಂಡಿಯ ಮನೆಗೆ ತೆರಳುತ್ತಿದ್ದಾಗ, ಹಿಂದಿನಿಂದ ಬಂದ ದೇವರಾಜ್ ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯ ಐಶ್ವರ್ಯ ಕಲ್ಯಾಣ ಮಂಟಪದ ಬಳಿ ಅಡ್ಡಗಟ್ಟಿ ವಿಜಯ್ ಚಾಕುವಿನಿಂದ ಇರಿದು, ಬಿಡಿಸಲು ಹೋದ ಕಾರ್ತಿಕ್‌ಗೂ ಗಾಯಗೊಳಿಸಿ ಪರಾರಿಯಾಗಿದ್ದನು. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ವಿಜಯ್‌ನನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕಾಗಿ ಪೋಲಿಸರ ತಂಡ ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.