Sunday, April 20, 2025
Google search engine

Homeರಾಜ್ಯಅಗ್ನಿವೀರ್ ತರಬೇತಿಯಲ್ಲಿದ್ದ ಯುವತಿ ಆತ್ಮಹತ್ಯೆ

ಅಗ್ನಿವೀರ್ ತರಬೇತಿಯಲ್ಲಿದ್ದ ಯುವತಿ ಆತ್ಮಹತ್ಯೆ

ಮುಂಬಯಿ: ಅಗ್ನಿವೀರ್‌ ತರಬೇತಿಯಲ್ಲಿದ್ದ 20 ಹರೆಯದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬಯಿಯಲ್ಲಿ‌ ನಡೆದಿದೆ.

ಮೃತ ಯುವತಿ ಕೇರಳದವರಾಗಿದ್ದು, ಮುಂಬೈಯ ಐಎನ್ ಎಸ್ ಹಮ್ಲಾದಲ್ಲಿ ತರಬೇತಿ ಪಡೆಯುತ್ತಿದ್ದಳು ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ತಿಳಿಸಿದೆ.

ಅಗ್ನಿವೀರ್‌ ಗಾಗಿ ನೌಕಾಪಡೆಯಲ್ಲಿ ತರಬೇತಿ ಪಡೆಯುತ್ತಿದ್ದ ಯುವತಿ ಬೆಡ್‌ ಶೀಟ್‌ ಸಹಾಯದಿಂದ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾರೆ ಎಂದು ಮಂಗಳವಾರ(ನ.28 ರಂದು) ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೃತ ಯುವತಿ ರಿಲೇಷನ್‌ ನಲ್ಲಿದ್ದರು. ಅವರ ಸಂಬಂಧದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಿತ್ತು. ಈ ಕಷ್ಟವನ್ನು ಎದುರಿಸಲಾಗದೆ ಈ ಹೆಜ್ಜೆಯನ್ನು ಆಕೆ ಇಟ್ಟಿದ್ದಾಳೆ ಎನ್ನಲಾಗಿದೆ.

ಘಟನೆಯ ಮಾಹಿತಿ ಬಳಿಕ  ನೌಕಾಪಡೆಯ ವೈದ್ಯರು ಯುವತಿಯನ್ನು ಪರೀಕ್ಷಿಸಿ, ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಸದ್ಯ ಈ ಬಗ್ಗೆ ಮಾಲ್ವಾನಿ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular