Thursday, April 3, 2025
Google search engine

Homeಸಿನಿಮಾಎ2 ಒರಿಜಿನಲ್ಸ್ ಮೂಲಕ ಹೊಸ ಹೆಜ್ಜೆ ಇಟ್ಟ A2 ಮ್ಯೂಸಿಕ್

ಎ2 ಒರಿಜಿನಲ್ಸ್ ಮೂಲಕ ಹೊಸ ಹೆಜ್ಜೆ ಇಟ್ಟ A2 ಮ್ಯೂಸಿಕ್

ನಿನಗಾಗಿ  ಮ್ಯೂಸಿಕಲ್ ಆಲ್ಬಂ ಸೀರೀಸ್ ರಿಲೀಸ್ ಮಾಡಿದ ಅಜಯ್ ರಾವ್

ಕನ್ನಡ ಸಿನಿಮಾ ಪ್ರಪಂಚದ ಸಂಗೀತ ಪ್ರೇಮಿಗಳು ಸದಾ ಗುನುಗುವ ಹಾಡುಗಳನ್ನು ಕೊಡುಗೆಯಾಗಿ ನೀಡಿರುವ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದು ಎ2 ಮ್ಯೂಸಿಕ್. ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ, ಅಲೆಮಾರಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳ ಮೂಲಕ ಸಂಚಲನ ಸೃಷ್ಟಿಸಿರುವ ಅಶ್ವಿನಿ ಮೀಡಿಯಾ ನೆಟ್ವರ್ಕ್‌ 2020ರಲ್ಲಿ ಹೊಸ ಆಯಾಮದಲ್ಲಿ A2 ಮ್ಯೂಸಿಕ್ ಹೆಸರಿನಲ್ಲಿ ಮರು ನಾಮಕರಣವಾಯಿತು. ಸಲಗ ಸಿನಿಮಾ ಮೂಲಕ ಗಾಂಧಿ ನಗರದಲ್ಲಿ ಹೊಸ ಹೆಜ್ಜೆ ಇಟ್ಟು ವಿಜಯೋತ್ಸವನ್ನು ಸಂಭ್ರಮಿಸಿತು.

ಬಳಿಕ A2 ಸಂಸ್ಥೆ ಭತ್ತಳಿಕೆಯಿಂದ ಬಂದ ಹಾಡುಗಳೆಲ್ಲವೂ ದಾಖಲೆ ಬರೆದಿವೆ. ಇತ್ತೀಚೆಗೆ ಸೂತ್ರಧಾರ, ಹಂಟರ್, ಕೆಟಿಎಂ, ಯುದ್ಧಕಾಂಡ, ಹಾಸ್ಟೆಲ್ ಹುಡುಗರು ಸೇರಿದಂತೆ ನೂರಕ್ಕೂ ಹೆಚ್ಚು ಹೊಸ ಸಿನಿಮಾಗಳ ಆಡಿಯೋ ಖರೀದಿ ಮಾಡುವ ಮೂಲಕ ಸಂಚಲನ ಸೃಷ್ಟಿಸಿರುವ A2 ಮ್ಯೂಸಿಕ್, A2 originals, A2 entertainment, A2 ಭಕ್ತಿಸಾಗರ, A2 ಫ್ಲೋಕ್ಲೋರ್, A2 ಕ್ಲಾಸಿಕಲ್ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲೂ ಹೊರಹೊಮ್ಮಿದೆ. ಇದೇ A2 ಒರಿಜಿನಲ್ಸ್ ಫ್ಲಾಟ್ ಫಾರ್ಮ್ ಮೂಲಕ ಮತ್ತೊಂದು ಸಾಹಸಕ್ಕಿಳಿದಿದೆ.

ಹೊಸ ಪ್ರತಿಭೆಗಳಿವೆ ವೇದಿಕೆ ಕಲ್ಪಿಸಿ ಕೊಡುವ ಮೂಲಕ ಮ್ಯೂಸಿಕಲ್ ಸೀರೀಸ್ ನಿರ್ಮಾಣಕ್ಕೂ ಕೈ ಹಾಕಿದೆ. A2 ಸಂಸ್ಥೆಯ ಈ ಸಾಹಸಕ್ಕೆ ಕೃಷ್ಣ ಅಜಯ್ ರಾವ್ ಸಾಥ್ ಕೊಟ್ಟಿದ್ದಾರೆ. ‌ನಾಲ್ಕು ಭಾಷೆಯಲ್ಲಿ, ನಾಲ್ಕು ಚಾಪ್ಟರ್ ಗಳಲ್ಲಿ ಬರ್ತಿರುವ ಭಾರತದ ಪ್ರಪ್ರಥಮ ನಾನ್ ಫಿಲ್ಮಂ ಪ್ಯಾನ್ ಇಂಡಿಯಾ ನಿನಗಾಗಿ ಆಲ್ಬಂ  ಇದಾಗಿದೆ. ಎ2 ಮ್ಯೂಸಿಕ್ ಡಿಜಿಟಲ್ ವೇದಿಕೆಯಲ್ಲಿ ನಾಲ್ಕು ಹಂತಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ಹಾಡನ್ನು ನಟ ಅಜಯ್ ರಾವ್ ಬಿಡುಗಡೆ ಮಾಡಿ ನಾಯಕಿಯೊಂದಿಗೆ ಹೆಜ್ಜೆ ಹಾಕಿದರು.

ಇದೇ ವೇಳೆ ಮಾತನಾಡಿದೆ ಅಜಯ್ ರಾವ್,  ಎಕ್ಸ್ ಕ್ಯೂಸ್ ಮಿ ಸಿನಿಮಾದಿಂದಲೇ ನನ್ನ ಹಾಗೂ ಎ2 ಮ್ಯೂಸಿಕ್ ಸಂಸ್ಥೆಯ ಒಡನಾಟವಿದೆ.  ವ್ಯಕ್ತಿಗಳು, ಸಂಪರ್ಕ, ಸಂಬಂಧ ಎಲ್ಲಾ ಅವರೇ. ಆ ಅಭಿಮಾನ, ಪ್ರೀತಿ ಅಲ್ಲಿಂದ ಬೆಳವಣಿಗೆ ಆಗಿದೆ. ಎಕ್ಸ್ ಕ್ಯೂಸ್ ಮಿ‌ ಸಮಯದಲ್ಲಿಯೂ ನಾನು ಹೊಸಬ. ನನಗೂ ಯಾರು ಪರಿಚಯ ಇರಲಿಲ್ಲ. ಯಾರೋ ಒಬ್ಬರು ಅವಕಾಶ ಕೊಟ್ಟರು.  ಇವತ್ತು ಈ ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದೇನೆ. ಆರ್ಟಿಸ್ಟ್ ಪ್ರಸೆಂಟ್ ಮಾಡಿರುವ ರೀತಿ ಚೆನ್ನಾಗಿದೆ. ನೈಜತೆಯಾಗಿ ಹಾಡು ಮೂಡಿದೆ. ನನ್ನ ಹೊಸ ಸಿನಿಮಾ ಯುದ್ಧಕಾಂಡ ಆಡಿಯೋ ಎ2 ಮ್ಯೂಸಿಕ್ ಭಾರೀ ಮೊತ್ತಕ್ಕೆ ಖರೀದಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

A2 ಮ್ಯೂಸಿಕ್ ಸಂಸ್ಥೆಯ ಪ್ರವೀಣ್ ಮಾತನಾಡಿ, ಕಾನ್ಸೆಪ್ಟ್ ಚೆನ್ನಾಗಿದೆ ಎಂದು‌ ಮಾಡಿದ್ದೇವೆ. ಹೊಸಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದೇವೆ‌ ಎಂದು ತಿಳಿಸಿದರು.

ನಿರ್ದೇಶಕ ಅಕ್ಷ, ಇದೊಂದು ಮ್ಯೂಸಿಕಲ್ ಸೀರೀಸ್.‌ ಕನ್ನಡದಲ್ಲಿ ನಿನಗಾಗಿ ಎಂಬ ಟೈಟಲ್ ನಡಿ ರಿಲೀಸ್ ಆಗುತ್ತಿದೆ. ಬೇರೆ ಭಾಷೆಯಲ್ಲಿಯೂ ಬರುತ್ತಿದೆ. ಕನ್ನಡ ವರ್ಷನ್ ಆಲ್ಬಂನ್ನು ಲಾಕ್ ಡೌನ್ ಗೂ‌ ಮೊದಲು ಶುರು ಮಾಡಿದ್ದೆವು. ನಾನು ಮತ್ತು ಡಾರ್ಕ್ ಕಾಲೇಜ್ ದಿನಗಳಲ್ಲಿ ಚರ್ಚೆ ಮಾಡಿದ್ದೇವು. ಇಷ್ಡು ದೊಡ್ಡ ಪ್ರಮಾಣದಲ್ಲಿ ಆಗುತ್ತದೆ ಅಂದುಕೊಂಡಿರಲಿಲ್ಲ. ಒಂದು ವರ್ಷ ಆದಮೇಲೆ‌ ನಾಲ್ಕು ಹಾಡುಗಳನ್ನು ಒಂದು ಕಥೆಯಲ್ಲಿ ನರೇಟ್ ಮಾಡಬೇಕು ಎಂಬ ಐಡಿಯಾ ಬಂತು ಎಂದರು.

ನಿನಗಾಗಿ ಆಲ್ಬಂ ಸೀರೀಸ್ ಗೆ ಸಂಗೀತ ನಿರ್ದೇಶನ ಜೊತೆಗೆ ಪದಪುಂಜ ಪೊಣಿಸಿರುವುದು ಯುವ ಪ್ರತಿಭೆ ಟಾರ್ಕ್( ಆದರ್ಶ್).  ಅಕ್ಷ್ ನಿರ್ದೇಶನದ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ. ನಿರೀಕ್ಷಿತ್ ಹಾಗೂ ಯಾನ್ವಿ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಈ ಆಲ್ಬಂ ಕನ್ನಡದಲ್ಲಿ ವಿಭಿನ್ನ ಹಾಗೂ ಹೊಚ್ಚ ಹೊಸ ಪ್ರಯತ್ನವಾಗಿದೆ.

ಚಿಕ್ಕಮಗಳೂರು, ಹಾಸನ್, ಸಕಲೇಶಪುರ ಸುತ್ತಮುತ್ತಲಿನ ರಮಣೀಯ ಪ್ರದೇಶದಲ್ಲಿ ಈ ಆಲ್ಬಂನ ಚಿತ್ರೀಕರಣ ಮಾಡಲಾಗಿದ್ದು, ಶಶಾಂಕ್ ಜಂಗಮ್, ವಿಕ್ಕಿ ಮತ್ತು ದೀಪು ನಾರಾಯಣ್ ಛಾಯಾಗ್ರಹಣ ಜವಾಬ್ದಾರಿ ನಿರ್ವಹಿಸಿದ್ದಾರೆ. ಮುಂಬರುವ ದಿನಗಳಲ್ಲಿ  ಇಂಥ ಹೊಸ ಪ್ರಯತ್ನಗಳಿಗೆ ಎ2 ಒರಿಜಿನಲ್ಸ್ ಮುಂದಾಗಲಿದ್ದು, ಈ ಹೊಸತನದಿಂದ ಕೂಡಿರುವ ಮ್ಯೂಸಿಕಲ್ ಆಲ್ಬಂ ಅನ್ನು ಕನ್ನಡಿಗರು ಮೆಚ್ಚಿ ಹಂಚಿ ಹಾರೈಸಬೇಕಿದೆ.

RELATED ARTICLES
- Advertisment -
Google search engine

Most Popular